ಬಂಟ್ವಾಳದಲ್ಲೊಂದು ಹೃದಯವಿದ್ರಾವಕ ಘಟನೆ- ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪತಿ-ಪತ್ನಿ ಸಜೀವ ದಹನ

ಮಂಗಳೂರು(ಬಂಟ್ವಾಳ): ಮನೆ ಪಕ್ಕದ ಕಸಕಡ್ಡಿಗಳಿಗೆ ಹಾಕಿದ್ದ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡ ಪತಿ ಪತ್ನಿ ಇಬ್ಬರೂ ಸಜೀವ ದಹನಗೊಂಡ ಘಟನೆ ಬಂಟ್ವಾಳ ತಾಲೂಕಿನ ಲೋರೆಟ್ಟೋ ಸಮೀಪದ ತುಂಡುಪದವು ಎಂಬಲ್ಲಿ ಜ.28ರ ಭಾನುವಾರ ಮಧಾಹ್ನ ವೇಳೆ ಸಂಭವಿಸಿದೆ.

ಲೊರೆಟ್ಟೊಪದವು ತುಂಡುಪದವು ನಿವಾಸಿ, ಕ್ರಿಸ್ಟಿನ್ ಕಾರ್ಲೋ(70) ಹಾಗೂ ಗಿಲ್ಬರ್ಟ್ ಕಾರ್ಲೊ (78) ಮೃತಪಟ್ಟವರು. ಮೃತರು ಮನೆ ಸಮೀಪದ ಕಸಕಡ್ಡಿಗೆ ಬೆಂಕಿ ಹಾಕಿದ್ದರು. ಮಧ್ಯಾಹ್ನದ ವೇಳೆಯಾಗಿದ್ದ ಕಾರಣ ಬೆಂಕಿಯ ಕೆನ್ನಾಲಿಗೆ ಪಕ್ಕದ ಕಾಡಿನವರೆಗೂ ವ್ಯಾಪಿಸಿಕೊಂಡಿದೆ. ಇದನ್ನು ಕಂಡ ದಂಪತಿಗಳು ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ದಂಪತಿಗಳು ಸುಟ್ಟುಕರಕಲಾಗಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

LEAVE A REPLY

Please enter your comment!
Please enter your name here