ಆನ್ಲೈನ್ನಲ್ಲಿ ಎಮ್ಮೆಗೆ ಆರ್ಡರ್-35 ಸಾವಿರ ರೂ ವಂಚನೆ-ಹಾಲಿನ ವ್ಯಾಪಾರಿಯ ಕಿವಿಗೆ ಹೂ ಮುಡಿಸಿದ ಎಮ್ಮೆ ವ್ಯಾಪಾರಿ

ಮಂಗಳೂರು(ಲಕ್ನೋ): ಉತ್ತರಪ್ರದೇಶದಲ್ಲಿ ಎಮ್ಮೆ ಖರೀದಿ ಮಾಡಲು ಆನ್ ಲೈನ್ನಲ್ಲಿ ಆರ್ಡರ್ ಮಾಡಿದ ಹಾಲಿನ ವ್ಯಾಪಾರಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಯ್ ಬರೇಲಿಯ ಹೈನುಗಾರ ಸುನಿಲ್ ಕುಮಾರ್ ಯುಟ್ಯೂಬ್ ನಲ್ಲಿ ಎಮ್ಮೆಯ ವಿಡಿಯೊ ನೋಡಿ ಆರ್ಡರ್ ಮಾಡಿದ್ದರು. ಯುಟ್ಯೂಬ್ ವಿಡಿಯೊದಲ್ಲಿ ಉಲ್ಲೇಖಿಸಲಾದ ದೂರವಾಣಿ ಸಂಖ್ಯೆಗೆ ಕಿಸಾನ್ ಭಯ್ಯಾ ಡೈರಿ ಫಾರ್ಮ್ ಅನ್ನು ಸಂಪರ್ಕಿಸಿದ ಅವರು ಜೈಪುರ ಮೂಲದ ಉದ್ಯಮಿ ಶುಭಂ ಅವರೊಂದಿಗೆ ಮಾತನಾಡಿದ್ದಾರೆ. ಅವರು ಎಮ್ಮೆ ಉತ್ತಮ ತಳಿಯದ್ದು, ಪ್ರತಿದಿನ 18 ಲೀಟರ್ ಹಾಲು ಕೊಡುತ್ತದೆ ಎಂದು ಭರವಸೆ ನೀಡಿದ್ದಾರೆ.

ಶುಭಂ, ಕುಮಾರ್ ಅವರಿಗೆ ಎಮ್ಮೆಯ ವಿಡಿಯೊವನ್ನು ಕಳುಹಿಸಿದ್ದು, ಅದರ ಬೆಲೆ ₹ 55,000 ಎಂದು ತಿಳಿಸಿದ್ದಾರೆ. ಖರೀದಿಗೆ ಮುನ್ನ ₹ 10,000 ಮುಂಗಡ ಹಣ ನೀಡುವಂತೆ ಹೇಳಿದ್ದಾರೆ. ಎಮ್ಮೆ ಖರೀದಿಸಲು ನಿರ್ಧರಿಸಿದ ಹಾಲಿನ ವ್ಯಾಪಾರಿ ತಕ್ಷಣ ಹಣ ವರ್ಗಾಯಿಸಿದರು. ಮರುದಿನ ಎಮ್ಮೆ ತಲುಪಿಸುವುದಾಗಿ ಹೇಳಿದ್ದರು. ಆದರೆ ಅದು ಬರದೇ ಇದ್ದಾಗ ಕುಮಾರ್ ಮಾರಾಟಗಾರನಿಗೆ ಮತ್ತೊಮ್ಮೆ ಕರೆ ಮಾಡಿದ್ದಾರೆ. ಆಗ ₹ 25,000 ವರ್ಗಾಯಿಸಲು ಕೇಳಲಾಯಿತು. 35 ಸಾವಿರ ಕಳೆದುಕೊಂಡ ಬಳಿಕ ಹಾಲಿನ ವ್ಯಾಪಾರಿಗೆ ತಾನು ವಂಚನೆ ಗೆ ಒಳಗಾಗಿರುವುದು ಗೊತ್ತಾಗಿದೆ.

LEAVE A REPLY

Please enter your comment!
Please enter your name here