ಡಿಐಜಿ ಅಮಿತ್ ಸಿಂಗ್ ವರ್ಗಾವಣೆ-ಪಶ್ವಿಮ ವಲಯ ಡಿಐಜಿಯಾಗಿ ಡಾ.ಬೋರಲಿಂಗಯ್ಯ 

ಮಂಗಳೂರು(ಬೆಂಗಳೂರು): ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ರಾಜ್ಯ ಸರ್ಕಾರ ದಿಢೀರ್‌ ವರ್ಗಾವಣೆಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.

ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ಬೋರಲಿಂಗಯ್ಯ ಅವರು ವರ್ಗವಾಗಿದ್ದು, ಅ‍ವರಿಂದ ತೆರವಾದ ಸ್ಥಾನಕ್ಕೆ ಪಶ್ಚಿಮ ವಲಯ ಡಿಐಜಿಯಾಗಿದ್ದ ಅಮಿತ್ ಸಿಂಗ್ ನೇಮಕಗೊಂಡಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೇ ಬೆಳಗಾವಿ ಆಯುಕ್ತರಾಗಿದ್ದ ಬೋರಲಿಂಗಯ್ಯ ಅವರು ದಕ್ಷಿಣ ವಲಯ ಡಿಐಜಿಯಾಗಿ ನಿಯೋಜಿತರಾಗಿದ್ದರು. ಬೋರಲಿಂಗಯ್ಯ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದವರಾಗಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತವರು ಜಿಲ್ಲೆಯಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

 

LEAVE A REPLY

Please enter your comment!
Please enter your name here