ರಕ್ಷಿತಾರಣ್ಯದ ನಡುವೆ ಪ್ರಯಾಣ-ಆನೆ ಕಂಡು ಫೋಟೋ ತೆಗೆಯಲು ಮುಂದಾದ ಪ್ರಯಾಣಿಕರು-ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು

ಮಂಗಳೂರು: ಸಂರಕ್ಷಿತ ಅರಣ್ಯ ಪ್ರದೇಶದ ನಡುವಿನ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿನಿಂದ ಇಳಿದ ಪ್ರಯಾಣಿಕರಿಬ್ಬರನ್ನು ಕಾಡಾನೆ ಅಟ್ಟಿಸಿಕೊಂಡು ಬಂದ ಮತ್ತು ಕಾಡಾನೆ ದಾಳಿಯಿಂದ ಇಬ್ಬರು ಪಾರಾಗಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೇರಳದ ವಯನಾಡು ವಲಯದ ಮುತುಂಗ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ದಟ್ಟಡವಿ ನಡುವಿನ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾಡಾನೆ ಕಂಡು ಕಾರಿನಲ್ಲಿದ್ದ ಇಬ್ಬರು ಕೆಳಗಿಳಿದು ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ಸಂದರ್ಭ ಕಾಡಾನೆ ಇವರಿಬ್ಬರನ್ನು ಅಟ್ಟಿಸಿಕೊಂಡು ಬಂದಿದೆ. ಕಾಡಾನೆಯಿಂದ ಪಾರಾಗಲು ಇಬ್ಬರೂ ಓಡಲಾರಭಿಸಿದಾಗ ಒಬ್ಬಾತ ಕೆಳಗೆ ಬೀಳುತ್ತಾನೆ. ಅವನನ್ನು ತುಳಿಯಲು ಕಾಡಾನೆ ಮುಂದಾಗುತ್ತದೆ. ಆದರೆ ಅದೃಷ್ಟವಶಾತ್ ಆನೆಯ ಕಾಲು ಕೆಳಗೆ ಬಿದ್ದ ವ್ಯಕ್ತಿಯ ದೇಹಕ್ಕೆ ತಗಲುವ ಮುನ್ನ ಆತ ಅದುಹೇಗೋ ಆನೆ ತುಳಿತದಿಂದ ಪಾರಾಗುತ್ತಾನೆ. ಎದುರಿನಿಂದ ಬರುವ ಬೇರೊಂದು ವಾಹನದ ಶಬ್ಧ ಕೇಳಿದ ಕಾಡಾನೆಗೆ ಅದೇನನ್ನಿಸಿತೋ ದಿಕ್ಕು ಬದಲಿಸಿದ ಆನೆ ಸುಮ್ಮನೆ ಅಡವಿಯೊಳಗೆ ಸೇರಿಕೊಂಡಿದೆ. ಎದುರಿನಿಂದ ಹೋಗುತ್ತಿದ್ದ ಕಾರಿನಲ್ಲಿದ್ದ ಕೇರಳದ ಕುಟುಂಬ ಈ ವಿಡಿಯೋ ಸೆರೆಹಿಡಿದಿದ್ದು, ವೈರಲ್‌ ಆಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here