ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ವಿವಿಧ ವಿಭಾಗಗಳಿಗೆ ಅಧ್ಯಕ್ಷರ,7ಮಂಡಲಗಳ ಮಂಡಲ ಅಧ್ಯಕ್ಷರನ್ನು ಸೇರಿದಂತೆ ಜಿಲ್ಲಾ ಮಾಧ್ಯಮ ಪ್ರಮುಖ್ ಜಿಲ್ಲಾ ವಕ್ತಾರ, ಸಾಮಾಜಿಕ ಜಾಲತಾಣಗಳ ಸಂಚಾಲಕ ಮತ್ತು ಸಹಚಂಚಾಲಕ ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ನೇಮಕಗೊಳಿಸಿ ದ.ಕ ಜಿಲ್ಲಾ ಬಿಜೆಪಿ ಆದೇಶ ಹೊರಡಿಸಿದೆ.
ಆದರೆ ಪುತ್ತೂರು ಮಂಡಲ ಅಧ್ಯಕ್ಷ ಮತ್ತು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಹೆಸರು ಘೋಷಣೆಯಾಗಿಲ್ಲ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರುವ ಕುರಿತು ಮಾತುಕತೆ ಮುಂದುವರಿದಿದ್ದು ಅವರಿಗಾಗಿ ಎರಡರಲ್ಲಿ ಒಂದು ಸ್ಥಾನ ಮೀಸಲಿರಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸ್ಪಷ್ಟ ಮಾಹಿತಿ ಇನ್ನೊಂದು ವಾರದಲ್ಲಿ ಹೊರಬೀಳಲಿದೆ ಎನ್ನಲಾಗಿದೆ.
ಪಕ್ಷ ಬಿಡುಗಡೆ ಮಾಡಿದ ಪಟ್ಟಿ ಇಂತಿದೆ