ಮಂಗಳೂರು(ಮುಂಬೈ): ಖ್ಯಾತ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಸುಳ್ಳಾಗಿದ್ದು, ಗರ್ಭಕಂಠದ ಕ್ಯಾನ್ಸರ್ ಗೆ ತುತ್ತಾಗಿ ಫೆ.2ರಂದು ಸಾವನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದರು. ಇದೀಗ ಪೂನಂ ಪಾಂಡೆ ಅವರು, ನಾನು ಸತ್ತಿಲ್ಲ, ಜೀವಂತವಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ನಿಂದ ನಾನು ಬಳಲುತ್ತಿಲ್ಲ. ಆದರೆ, ದುರಂತವೆಂದರೆ ಈ ರೋಗವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಜ್ಞಾನದ ಕೊರತೆಯಿಂದ ಸಾವಿರಾರು ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ರೋಗದ ಜಾಗೃತಿಗಾಗಿ ಇಂತಹ ಸುಳ್ಳು ಮಾಹಿತಿ ನೀಡಿದ್ದೇನೆ, ದಯವಿಟ್ಟು ಕ್ಷಮಿಸಿ. ನನ್ನ ಸಾವಿನ ಸುಳ್ಳು ಸುದ್ದಿಯಿಂದಾಗಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಪ್ರತಿಯೊಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ.
ಇತರ ಕೆಲವು ಕ್ಯಾನ್ಸರ್ಗಳಿಗಿಂತ ಭಿನ್ನವಾಗಿ, ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. HPV ಲಸಿಕೆ ಮತ್ತು ಆರಂಭಿಕ ಪತ್ತೆ ಪರೀಕ್ಷೆಗಳು ಪ್ರಮುಖವಾಗಿದ್ದು, ಈ ಕಾಯಿಲೆಯಿಂದ ಯಾರೂ ತಮ್ಮ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳಲು ನಾವು ಎಚ್ಚರದಿಂದಿರಬೇಕು. ವಿಮರ್ಶಾತ್ಮಕ ಅರಿವಿನೊಂದಿಗೆ ಒಬ್ಬರಿಗೊಬ್ಬರು ಜಾಗೃತಿ ಮೂಡಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಹಿಳೆಯರಿಗೆ ತಿಳಿಸೋಣ ಏನು ಮಾಡಬಹುದೆಂಬುದನ್ನು ಒಟ್ಟಾಗಿ, ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಶ್ರಮಿಸೋಣ ಎಂದು ಹೇಳಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://www.instagram.com/reel/C24C5DCtyRU/?utm_source=ig_web_copy_link