ಬೆಳ್ತಂಗಡಿಯ ಕುಕ್ಕೇಡಿ ಸ್ಫೋಟ ಪ್ರಕರಣ-ಮತ್ತೋರ್ವ ಆರೋಪಿ ಬಂಧನ

ಮಂಗಳೂರು(ಬೆಳ್ತಂಗಡಿ): ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡ್ತ್ಯಾರುವಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಜ.28 ರಂದು ಸಂಭವಿಸಿದ್ದ ಸ್ಫೋಟ ಪ್ರಕರಣ ಸಂಬಂಧ ನಾಲ್ಕನೇ ಆರೋಪಿಯನ್ನು ವೇಣೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ದಿವಾನರಪಾಳ್ಯ ಗೋಕುಲ ನಿವಾಸಿ ಅನಿಲ್ ಎಂ.ಡೇವಿಡ್ (49) ಬಂಧಿತ ಆರೋಪಿ. ಈತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಅನಿಲ್ ಪಟಾಕಿ ತಯಾರಿಕೆಗೆ ರಾಸಾಯನಿಕಗಳನ್ನು ಸರಬರಾಜು ಮಾಡುವ ಪರವಾನಗಿ ಹೊಂದಿದ್ದ. ಪಟಾಕಿ ತಯಾರಿಸುವವರಿಗೆ ಈತ ತಮಿಳುನಾಡಿನಿಂದ ನೇರವಾಗಿ ರಾಸಾಯನಿಕಗಳನ್ನು ಬಿಲ್‌ ಸಹಿತ ಪೂರೈಸುತ್ತಿದ್ದ. ಆರೋಪಿ ಬಶೀರ್‌ಗೂ ಭಾರಿ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಪೂರೈಸಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಕುಕ್ಕೇಡಿಯ ‘ಸಾಲಿಡ್‌ ಫೈರ್‌ ವರ್ಕ್ಸ್‌’ ಘಟಕದ ಮಾಲೀಕ ಬಶೀರ್ ಹಾಗೂ ಎರಡನೆಯ ಆರೋಪಿ ಕಿರಣ್ ಅನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಅವರಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟ ವರ್ಗೀಸ್ ಎಂಬಾತನನ್ನೂ ಪೊಲೀಸರು ಆರೋಪಿ ಎಂದು ಪರಿಗಣಿಸಿದ್ದಾರೆ.

LEAVE A REPLY

Please enter your comment!
Please enter your name here