ಕೈಕೊಟ್ಟ ಪ್ರೀತಿಸಿದ ಹುಡುಗಿ-ಬೇರೊಬ್ಬನ ಜೊತೆ ಅಕ್ರಮ ಸಂಬಂಧ-ನೊಂದ ಯುವಕ ಆತ್ಮಹತ್ಯೆಗೆ ಶರಣು-ಯುವಕನ ಪೋಷಕರಿಂದ ದೂರು ದಾಖಲು

ಮಂಗಳೂರು(ಬೆಂಗಳೂರು) :ಪ್ರೀತಿಸಿದ ಯುವಕನೋರ್ವ ತಾನು ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ತಿಳಿದು ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಮೃತನ ಕುಟುಂಬಸ್ಥರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅನ್ಬರಸನ್‌ ಎಂದು ಗುರುತಿಸಲಾಗಿದೆ. ವಿದ್ಯಾ ಎಂಬಾಕೆಗೆ ಈ ಹಿಂದೆ ಮದುವೆಯಾಗಿದ್ದು, ವಿಚ್ಛೇದನ ಪಡೆದಿದ್ದರು. ನಂತರದ ದಿನಗಳಲ್ಲಿ ಅನ್ಬರಸನ್‌ ಜೊತೆ ಪ್ರೀತಿಯಾಗಿ, ಇಬ್ಬರೂ ಆರು ತಿಂಗಳಿನಿಂದ ಲಿವಿಂಗ್‌ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರೂ ತಾವು ಪತಿ ಪತ್ನಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆಯಲ್ಲಿ‌ ವಾಸವಿದ್ದರು. ವಿದ್ಯಾ ಐಟಿ ಕಂಪನಿ ಉದ್ಯೋಗಿಯಾಗಿದ್ದರೆ, ಅನ್ಬರಸನ್‌ ಪ್ಲಿಪ್‌ ಕಾರ್ಟ್‌ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ. ಆದರೆ ಈ ನಡುವೆ ವಿದ್ಯಾ ಮತ್ತೋರ್ವನ ಜತೆ ಪ್ರೀತಿ ಸಹವಾಸಕ್ಕೆ ಬಿದ್ದಿದ್ದಾಳೆ. ಸಂತೋಷ್‌ ಎಂಬಾತನ ಜೊತೆ ವಿದ್ಯಾ ಅಕ್ರಮ ಸಂಬಂಧ ಹೊಂದಿದ್ದು, ಅನ್ಬರಸನ್‌ ತನ್ನ ಕಣ್ಣಾರೆ ಸಂತೋಷ್‌ ಮತ್ತು ವಿದ್ಯಾ ಜೊತೆಯಲ್ಲಿರುವುದನ್ನು ಕಂಡಿದ್ದ. ಇದರಿಂದ ನೊಂದ ಅನ್ಬರಸನ್‌ ವಿದ್ಯಾಗೆ ಬುದ್ಧಿವಾದ ಹೇಳಿದರೂ ಕ್ಯಾರೆ ಎನ್ನದ ವಿದ್ಯಾ ತನ್ನ ಚಾಳಿ ಮುಂದುವರಿಸಿದ್ದಾಳೆ. ಇದರಿಂದ ನೊಂದ ಅನ್ಬರಸನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಅನ್ಬರಸನ್‌ ತಂದೆ ತಾಯಿ ಯುಡಿಆರ್‌ ಪ್ರಕರಣವನ್ನು ದಾಖಲು ಮಾಡಿದ್ದರು. ಆದರೆ ವಿದ್ಯಾ ಜೊತೆ ಮಾತನಾಡಿರುವ ಕಾಲ್‌ರೆಕಾರ್ಡ್‌ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಪ್ರಕರಣ ದಾಖಲು ಮಾಡಲಾಗಿದೆ. ವಿದ್ಯಾ, ಸಂತೋಷ್‌ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here