ಬಡಗ ಎಡಪದವು ಗ್ರಾಮದ ತಿಪ್ಪೆಬೆಟ್ಟು ಎಂಬಲ್ಲಿ ಹಟ್ಟಿಗೆ ನುಗ್ಗಿ ದನ ಕಳವು-ಮೂಡುಬಿದಿರೆಯ ಇಬ್ಬರ ಬಂಧನ, ಓರ್ವ ಪರಾರಿ

ಮಂಗಳೂರು: ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯ ಹಲವು ಕಡೆ ದನ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಜಪೆ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹಂಝಾ ಎಂಬಾತ ಪರಾರಿಯಾಗಿದ್ದು, ಮೂಡುಬಿದಿರೆ ಕೊಡಂಗಲ್ ನಿವಾಸಿ ಮೊಹಮ್ಮದ್ ಶರೀಫ್ ಮತ್ತು ಮೂಡುಬಿದಿರೆ ಹಿದಾಯತ್ ನಗರ ನಿವಾಸಿ ಹಸೈನಾರ್ ಎಂಬವರನ್ನು ಬಂಧಿಸಲಾಗಿದೆ.

ಬಡಗ ಎಡಪದವು ಗ್ರಾಮದ ತಿಪ್ಪೆಬೆಟ್ಟು ನಿವಾಸಿ ಸುಜಾತ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳ ಪೈಕಿ 2 ಹಸುಗಳು ಮತ್ತು 1 ಕರುವನ್ನು ಕಳವು ಮಾಡಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಫೆಬ್ರವರಿ 8 ರಂದು ಬೆಳಿಗ್ಗೆ ಮುಳ್ಳೂರು ಕ್ರಾಸ್ ಬಳಿ ಕಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.  ಬಂಧಿತ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದು, ಕದ್ದ ದನವನ್ನು ತೋಡಾರಿನ ಅನ್ಸಾರ್ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿಗಳಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಮಾರ್ಗದರ್ಶನದಂತೆ ಡಿಸಿಪಿಗಳಾದ ಗೋಯೆಲ್ ಮತ್ತು ದಿನೇಶ್ ಕುಮಾರ್ ನಿರ್ದೇಶನದಂತೆ ಎಸಿಪಿ ಮನೋಜ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕ ಸಂದೀಪ್ ಜಿ ಎಸ್ ನೇತೃತ್ವದಲ್ಲಿ ಮತ್ತು ಮೂಡುಬಿದಿರೆ ಠಾಣಾ ನಿರೀಕ್ಷಕ ಸಂದೇಶ್ ತಂಡ ಮತ್ತು ಬಜಪೆ ಪಿಎಸ್ಐ ರೇವಣ ಸಿದ್ದಪ್ಪ, ಪಿಎಸ್ಐ ಗುರಪ್ಪ ಕಾಂತಿ, ಕುಮಾರೇಶನ್, ಬಜಪೆ ಎಎಸ್ಐ ರಾಮಪೂಜಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here