ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ಮಹಿಳೆ ಕೇರಳದಲ್ಲಿ ಪತ್ತೆ

ಮಂಗಳೂರು(ಕಾರವಾರ): ಜಪಾನ್ ಪ್ರವಾಸಿ ಮಹಿಳೆ ಎಮಿ ಯಮಾಝಕಿ (43) ಗೋಕರ್ಣದಿಂದ ನಾಪತ್ತೆಯಾಗಿದ್ದು, ಇದೀಗ ಕೇರಳದ ತಿರುವನಂತಪುರದಲ್ಲಿ ಫೆ.9ರಂದು ಪತ್ತೆಯಾಗಿದ್ದಾರೆ. ಗೋಕರ್ಣ ಪೊಲೀಸರ ತಂಡ ಆಕೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಫೆ.4ರಂದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್​ನಲ್ಲಿ ಪತಿ ಜತೆ ತಂಗಿದ್ದರು. ಆದರೆ ಪತಿ ಮಲಗಿದ್ದ ವೇಳೆ ಅಂದರೆ ಫೆ.5ರ ಬೆಳಗ್ಗೆ 10.15ರ ಸುಮಾರಿಗೆ ಕಾಟೇಜ್​ನಿಂದ ಹೊರಬಂದಿದ್ದ ಎಮಿ ಯಮಾಝಕಿ ಬಳಿಕ ನಾಪತ್ತೆಯಾಗಿದ್ದರು. ಆಕೆಯ ಪತಿ ದೈ ಯಮಾಝಕಿ ಗೋಕರ್ಣ ಠಾಣೆಯಲ್ಲಿ ದೂರು ನೀಡಿದ್ದರು. ಕಾಟೇಜ್‌ನಲ್ಲಿ ತನ್ನ ಪತಿಯ ಜತೆ ತಂಗಿದ್ದ ಮಹಿಳೆ ಯಾವುದೋ ವಿಷಯಕ್ಕೆ ಗಲಾಟೆ ಮಾಡಿಕೊಂಡಿದ್ದಳು. ನಂತರ ಪತಿಯ ಮೇಲಿನ ಸಿಟ್ಟಿನಿಂದ ಮುಂಜಾನೆ ಎದ್ದು ಹೋದ ಮಹಿಳೆ ಗೋಕರ್ಣದ ರೈಲ್ವೆ ನಿಲ್ದಾಣಕ್ಕೆ ತೆರಳಿ ಹಿಂದೆ ಭೇಟಿ ನೀಡಿದ್ದ ಕೇರಳಕ್ಕೆ ತೆರಳಿದ್ದಾಳೆ. ನಾಪತ್ತೆಯಾದ ನಂತರ ಆನ್ಲೈನ್ ​ನಲ್ಲಿ ಎಮಿ ಯಮಾಝಕಿ ಸಂಪರ್ಕದಲ್ಲಿದ್ದರು. ಅದನ್ನು ಆಧರಿಸಿ ತಂಡದೊಂದಿಗೆ ಕೇರಳಕ್ಕೆ ತೆರಳಿದ್ದ ಪಿಎಸ್​ಐ ಖಾದರ್ ಬಾಷಾ, ಸುಧಾ ಅಘನಾಶಿನಿ ನೇತೃತ್ವದ ಗೋಕರ್ಣ ಪೊಲೀಸರ ತಂಡ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here