ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ರೀಲ್ಸ್-38 ವಿದ್ಯಾರ್ಥಿಗಳು ಅಮಾನತು

ಮಂಗಳೂರು(ಗದಗ): ಗದಗಿನ ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಜೀಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. 38 ವಿದ್ಯಾರ್ಥಿಗಳಿಗೆ 10 ದಿನಗಳ ಕಾಲ ಅಮಾನತು ಶಿಕ್ಷೆ ನೀಡಲಾಗಿದೆ.

ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಯ ಜನರಲ್ ವಾರ್ಡ್, ಕಾರಿಡಾರ್, ಮಕ್ಕಳ ವಾರ್ಡ್, ತರಗತಿ ಕೊಠಡಿ ಸೇರಿದಂತೆ ಆಸ್ಪತ್ರೆಯ ಎಲ್ಲಾ ಭಾಗಗಳಲ್ಲಿ ರೀಲ್ಸ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿತ್ತು. ಜಿಲ್ಲಾಸ್ಪತ್ರೆಯನ್ನೇ ರೀಲ್ಸ್ ಸ್ಪಾಟ್ ಮಾಡಿಕೊಂಡಿದ್ದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು. ಹೀಗಾಗಿ ಒಟ್ಟು 38 ವಿದ್ಯಾರ್ಥಿಗಳಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ರೀಲ್ಸ್ ಮಾಡಿರೋ ಎಲ್ಲರೂ MBBS ಪೂರ್ಣಗೊಳಿಸಿ ಹೌಸ್ ಮೆನ್‌ಶಿಪ್‌ನಲ್ಲಿದ್ದಾರೆ. ಈ ರೀತಿ ವಿಡಿಯೋ‌ ಮಾಡೋದಕ್ಕೆ ನಾವ್ಯಾರೂ ಅನುಮತಿ ಕೊಟ್ಟಿಲ್ಲ. ಯಾರೇ ಇರಲಿ, ಆಸ್ಪತ್ರೆಯಲ್ಲಿ ಈ ರೀತಿ ಮಾಡಿದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ತೇವೆ. ಹಾಗೂ ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪೋಸ್ಟಿಂಗ್ 10 ದಿನಗಳ ಕಾಲ ತಡವಾಗಿ ಸಿಗಲಿದೆ ಎಂದು ಜೀಮ್ಸ್ ನಿರ್ದೇಶಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here