ಮಂಗಳೂರು(ಕಾಸರಗೋಡು): ಉತ್ಸವ ವೇಳೆ ಆವೇಶಕ್ಕೊಳಗಾದ ದೈವವನ್ನು ಕಂಡು ಭಯಗೊಂಡು ಓಡಿದ ಬಾಲಕ ಬಿದ್ದು ಗಾಯಗೊಂಡಿದ್ದು, ಇದರಿಂದ ಕೋಪಗೊಂಡ ತಂಡವೊಂದು ದೈವವೇಷ ಧರಿಸಿದ ಕಲಾವಿದನಿಗೆ ಹಲ್ಲೆಗೈದ ಘಟನೆ ಕಣ್ಣೂರು ಬಳಿ ತಿಲ್ಲಂಗೇರಿ ಎಂಬಲ್ಲಿ ನಡೆದಿದೆ.
ಈ ಘಟನೆಯ ಬಗ್ಗೆ ಕಾರವಾಲ್ ಮಾಧ್ಯಮ ವರದಿಯನ್ನು ಪ್ರಕಟಿಸಿದೆ. ಪೆರಿಂಗಾನಂ ಉದಯಂಕುನ್ನು ಮಡಪ್ಪುರ ಉತ್ಸವದ ಅಂಗವಾಗಿ ಫೆ. 7ರಂದು ಸಂಜೆ ಕೈದ ಚಾಮುಂಡಿ ದೈವಕೋಲ ನಡೆಸಲಾಗಿತ್ತು. ದೈವ ಮಡಪ್ಪುರಕ್ಕೆ ಆಗಮಿಸುತ್ತಿದ್ದಂತೆ ಆವೇಶಕ್ಕೊಳಗಾಗಿದೆ. ಇದನ್ನು ಕಂಡು ಹೆದರಿ ಬಾಲಕ ಓಡುತ್ತಿರುವ ವೇಳೆ ಬಿದ್ದು ಗಾಯಗೊಂಡಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ತಂಡ ದೈವ ಕಲಾವಿದನಿಗೆ ಹಲ್ಲೆ ನಡೆಸಿದೆ. ಇಷ್ಟಾಗುತ್ತಿದ್ದಂತೆ ಪೊಲೀಸರು ಹಾಗೂ ಉತ್ಸವ ಸಮಿತಿಯವರು ಸೇರಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ಯಾವುದೇ ದೂರು ದಾಖಲಾಗಿಲ್ಲ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ