ಮಣ್ಣಿನ ಮಕ್ಕಳಿಗೆ ಕೂಡಿಬಾರದ ವಿವಾಹಬಂಧ-ಮದುವೆಯಾಗಲು ಹೆಣ್ಣಿನ ಕೊರತೆ-ಪೋಷಕರೊಂದಿಗೆ ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ತೆರಳಿದ ಯುವಕರು

ಮಂಗಳೂರು(ಚಾಮರಾಜನಗರ): ಮದುವೆಯಾಗಲು ಹೆಣ್ಣು ಸಿಗದೆ ಹೈರನಾದ ಒಂದು ಸಾವಿರಕ್ಕೂ ಹೆಚ್ಚು ಯುವಕರು ಮತ್ತು ಪೋಷಕರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿಯಿಂದ ಮಲೆಮಹದೇಶ್ವರನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ಸಾಗಿ ವಿವಾಹ ಭಾಗ್ಯಕ್ಕಾಗಿ ಹೆಣ್ಣು ಕರುಣಿಸುವಂತೆ ದೇವರಿಗೆ ಮೊರೆ ಹೋಗಿದ್ದಾರೆ.

ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದಿರುವ ಬೇಕಾದಷ್ಟು ಗಂಡು ಮಕ್ಕಳಿದ್ದಾರೆ. ಕೃಷಿ ಮಾಡುವ ತಮ್ಮ ಗಂಡು ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಮಕ್ಕಳಿಗೆ ಮದುವೆ ವಯಸ್ಸು ಮೀರುತ್ತಿದೆ ಎಂಬ ಆತಂಕ ಪೋಷಕರಲ್ಲಿ ಕಾಡುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಹೆಣ್ಣು ಕರುಣಿಸುವಂತೆ ಪೋಷಕರು ತಮ್ಮ ಮಕ್ಕಳೊಂದಿಗೆ ಮಹದೇಶ್ವರನ ಮೊರೆ ಹೋಗಿದ್ದಾರೆ. ಚಾಮರಾಜನಗರದಲ್ಲಿರುವ ಮಲೆ ಮಾದೇಶ್ವರನ ಸನ್ನಿಧಿಗೆ ಅಂಚೆದೊಡ್ಡಿಯಿಂದ 115 ಕಿಲೋಮೀಟರ್ ದೂರದಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ತಮ್ಮ ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here