ಬೆಂಜನಪದವಿನಿಂದ ಪುತ್ತೂರಿನ ಸವಣೂರಿಗೆ ಲಾರಿಯಲ್ಲಿ ರೋಲರ್‌ ಸಾಗಾಟ-ಮೊಡಂಕಾಪು ರೈಲ್ವೆ ಓವರ್ ಬ್ರಿಡ್ಜ್ ನ ಅಡಿಭಾಗದಲ್ಲಿ ಸಿಲುಕಿಕೊಂಡ ಲಾರಿ

ಮಂಗಳೂರು(ಬಂಟ್ವಾಳ): ರೋಲರ್ ವಾಹನವನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ರೈಲ್ವೆ ಓವರ್ ಬ್ರಿಡ್ಜ್ ನ ಅಡಿಭಾಗದಲ್ಲಿ ಸಿಲುಕಿಕೊಂಡ ಘಟನೆ ಫೆ.13ರ ಮಂಗಳವಾರ ನಡೆದಿದ್ದು, ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾದ ಘಟನೆ ಬಿಸಿರೋಡಿನ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿ ನಡೆದಿದೆ.

ಪವಿತ್ರ ಗುತ್ತಿಗೆ ಸಂಸ್ಥೆಗೆ ಸೇರಿದ ರೋಲರ್ ಅನ್ನು ಬೆಂಜನಪದವು ಸೈಟ್ ನಿಂದ ಪುತ್ತೂರಿನ ಸವಣೂರು ಎಂಬಲ್ಲಿ ನಡೆಯಲಿರುವ ಕಾಮಗಾರಿಗಾಗಿ ಲಾರಿಯಲ್ಲಿ ತುಂಬಿಸಿಕೊಂಡು ಹೋಗುವ ವೇಳೆ ಮೊಡಂಕಾಪು ಎಂಬಲ್ಲಿ ರೈಲ್ವೆ ಓವರ್‌ ಬ್ರಿಡ್ಜ್ ಅಡಿಭಾಗದಲ್ಲಿ  ಸಿಲುಕಿಕೊಂಡಿದೆ. ರೈಲ್ವೆಯ ಓವರ್ ಬ್ರಿಡ್ಜ್ ನ ಎತ್ತರಕ್ಕಿಂತ ಅಧಿಕ ಎತ್ತರದಲ್ಲಿ ಲಾರಿಯ ಲೋಡ್ ಮಾಡಿಕೊಂಡಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಘಟನೆಯಿಂದ ರೈಲ್ವೆ ಇಲಾಖೆಗೆ ಸೇರಿದ ಕಬ್ಬಿಣದ ರಾಡ್ ತುಂಡಾಗಿ ಲಾರಿಯ ಮೇಲೆ ಬಿದ್ದಿದೆ. ‌ ಘಟನೆ ನಡೆದ ಸಂದರ್ಭ ಸಂಚಾರಕ್ಕೆ ಅಡಚಣೆಯಾಗಿದ್ದು, ಮೆಲ್ಕಾರ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿದರು. ಎ.ಎಸ್.ಐ.ಗಳಾದ ಜನಾರ್ಧನ, ಸುರೇಶ್ ಪಡಾರ್ ಮತ್ತು ಸಿಬ್ಬಂದಿ ಅಭಿಷೇಕ್ ಮತ್ತು ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here