ಮಂಗಳೂರು(ನವದೆಹಲಿ): ಭಾರತದ ದೀರ್ಘಕಾಲೀನ ಟೆಸ್ಟ್ ಕ್ರಿಕೆಟಿಗ ಮತ್ತು ಮಾಜಿ ನಾಯಕ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ ಮಂಗಳವಾರ(ಫೆ.13) ಬರೋಡಾದ ಅವರ ನಿವಾಸದಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಕ್ರಿಕೆಟಿಗನಾಗಿದ್ದ ಅಂಶುಮಾನ್ ಗಾಯಕ್ವಾಡ್ ಅವರ ತಂದೆಯಾಗಿರುವ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ 1952 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 1961 ರಲ್ಲಿ ಚೆನ್ನೈನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಟೆಸ್ಟ್ ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.