ಚೀನಾದಿಂದ ಬೆಂಗಳೂರು ತಲುಪಿದ ಮೊದಲ ಚಾಲಕ ರಹಿತ ಮೆಟ್ರೋ

ಮಂಗಳೂರು/ಬೆಂಗಳೂರು: ಚೀನಾದಿಂದ ಜ.24ರಂದು ಸಮುದ್ರ ಮಾರ್ಗವಾಗಿ ಹೊರಟ ಚಾಲಕ ರಹಿತ ಮೆಟ್ರೋಟ್ರೈನ್ ಫೆ.6ರಂದು ಚೀನಾದಿಂದ ಚೆನ್ನೈ ಬಂದರಿಗೆ ತಲುಪಿದ್ದು, ಬಳಿಕ ರಸ್ತೆ ಮೂಲಕ ಇಂದು ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದೆ.

ಈ ಚಾಲಕ ರಹಿತ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ನಲ್ಲಿ ಸಂಚರಿಸಲಿದ್ದು, ಮೊದಲ ಪ್ರಯಾಣ ಅನುಭವಕ್ಕಾಗಿ ಬೆಂಗಳೂರು ಜನ ಕಾತುರದಿಂದ ಕಾಯುತ್ತಿದ್ದಾರೆ. ಈ ಮೆಟ್ರೋದ ಪ್ರತಿ ಕೋಚ್ ಬರೋಬ್ಬರಿ 38.7 ಮೆಟ್ರಿಕ್ ಟನ್ ತೂಕವಿದೆ. ಚೀನಾ ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ ಈ ಚಾಲಕ ರಹಿತ ರೈಲ್ ತಯಾರಿಸಿದ್ದು, ಚಾಲಕ ಇಲ್ಲದಿದ್ದರೂ ಪ್ರೋಗ್ರಾಂ ಆಧಾರದ ಮೇಲೆ ರೈಲು ಸಂಚರಿಸಲಿದೆ. ರೈಲಿನ ಸಂಚಾರವನ್ನು ಕಂಟ್ರೋಲ್‌ ರೂಮ್​ನಲ್ಲಿ ನಿಗಾ ವಹಿಸಲಾಗುತ್ತದೆ.‌

ಚಾಲಕ ರಹಿತ 25 ಕೆವಿ ಸಾಮರ್ಥ್ಯದ ಈ ಮೆಟ್ರೋ ರೈಲು ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಲಿದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದ್ದು, ಇನ್ನು ಸಂಚಾರದಲ್ಲಿ ಸಮಸ್ಯೆಯಾದರೆ ತಕ್ಷಣ ಸಂದೇಶ ಕಂಟ್ರೋಲ್‌ ರೂಮ್‌ ತಲುಪುತ್ತದೆ.

LEAVE A REPLY

Please enter your comment!
Please enter your name here