ಮಂಗಳೂರು/ಕಲಬುರಗಿ: ತಾಯಿಯೊಬ್ಬಳು ಹೆತ್ತ ಕಂದಮ್ಮನನ್ನು ಕೊಲೆ ಮಾಡಿ ನೇಣು ಹಾಕಿ, ಬಳಿಕ ಆಕೆಯು ನೇಣಿಗೆ ಶರಣಾಗಿರುವ ದುರ್ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಲೀಲಾ(23) ವರ್ಷಿತಾ(2) ಮೃತ ದುರ್ದೈವಿಗಳು.
ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಜೊತೆ ಶಿವಲೀಲಾ ಮದುವೆಯಾಗಿದ್ದಳು. ಆದರೆ ಗಂಡ, ಅತ್ತೆಯ ಕಿರುಕುಳಕ್ಕೆ ಬೇಸತ್ತು ಶಿವಲೀಲಾ ತವರು ಮನೆ ಸೇರಿದ್ದಳು. ಎರಡು ದಿನದ ಹಿಂದೆಯಷ್ಟೇ ಮತ್ತೆ ಶಿವಲೀಲಾ ಗಂಡನ ಮನೆಗೆ ತೆರಳಿದ್ದಳು. ಆದರೆ ನಿನ್ನೆ ಸಂಜೆ ನಿವಾಸದಲ್ಲಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.