ಫೆ.17: ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ-ಈ ಸಮ್ಮೇಳನ ದೇಶಕ್ಕೆ ಸಂದೇಶ ನೀಡುವ ಸಮ್ಮೇಳನವಾಗಲಿದೆ-ಮಾಜಿ ಸಚಿವ ರಮಾನಾಥ ರೈ

ಮಂಗಳೂರು: ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಫೆ.17ರಂದು ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕಾಲೇಜು ಎದುರಿನ ಗ್ರೌಂಡಲ್ಲಿ ನಡೆಯಲಿದೆ. ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಸೃಷ್ಟಿಯಾಗಿದ್ದು, ಮತ್ತೊಮ್ಮೆ ಜಿಲ್ಲೆಯಲ್ಲಿ ಕೈ ಬಲವಾಗಲಿದೆ. ಅದಕ್ಕೆ ಈ ಸಮಾವೇಶ ಪೂರಕವಾಗಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಭವಿಷ್ಯದಲ್ಲಿ ಮತ್ತೆ ಕೈ ಫೀನಿಕ್ಸ್ ನಂತೆ ಹೊರಬರಲಿದೆ. ಎಷ್ಟೇ ತೊಂದರೆ ಆದರೂ ಸಂಘ ಪರಿವಾರ ಜತೆ ನಿರಂತರ ಹೋರಾಟ ಮಾಡಿ ಬಂದ ಕಾರ್ಯಕರ್ತರು ಈಗಲೂ ಬಲಿಷ್ಟವಾಗಿದ್ದಾರೆ. ಈ ಸಮ್ಮೇಳನ ದೇಶಕ್ಕೆ ಸಂದೇಶ ನೀಡುವ ಸಮ್ಮೇಳನ ಆಗಲಿದೆ. ರಾಜ್ಯದಲ್ಲಿ ಕೈ ಮತ್ತೆ ಅಧಿಕಾರಕ್ಕೆ ಬಂದಿದೆ. ಉಭಯ ಜಿಲ್ಲೆಯಲ್ಲಿ ಹಿನ್ನಡೆ ಆಗಿದ್ದರೂ ಸರ್ಕಾರದ ಭರವಸೆ ಈಡೇರಿಕೆ ಆಗಿದೆ. ಸರಕಾರದ ಗ್ಯಾರಂಟಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗಬಾರದು ಎಂದು ಪ್ರಯತ್ನಿಸಿದ್ದರು. ಹಣ ನೀಡಿದರೂ ಅಕ್ಕಿ ನೀಡದೆ ಇದ್ದುದು ಕೇಂದ್ರ ಸರಕಾರ ಜನರಿಗೆ ಮಾಡಿದ ದೊಡ್ಡ ದ್ರೋಹ. ಮೋದಿ ಗ್ಯಾರಂಟಿ ಹೇಳ್ತಾರೆ. ಕೊಟ್ಟರೆ ದೀಪಾವಳಿ, ಕೈ ಭರವಸೆ ನೀಡಿದರೆ ದಿವಾಳಿ ಅಂತಾರೆ. ಇಂದು ರಾಜ್ಯ ಸರಕಾರ ನೀಡಿದ ಗ್ಯಾರಂಟಿಗಳು ಭರವಸೆ ಆಗಿ ಉಳಿಯದೆ ಜನರಿಗೆ ತಲುಪುತ್ತಿದೆ. ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಕೈ ಅಧಿಕಾರಕ್ಕೆ ಬಂದಾಗಲೆಲ್ಲ‌ ಬಡವರ ಕಾರ್ಯಕ್ರಮ ಯಥಾವತ್ತಾಗಿ ಅನುಷ್ಠಾನ ಆಗುವ ಜಿಲ್ಲೆ ದ.ಕ. ಭೂ ಮಸೂದೆ ಕಾನೂನು ಜಾರಿಗೂ ಹಿಂದೆ ಒಂದು ಗ್ರಾಮದಲ್ಲಿ 10-15 ಪಟ್ಟಾದಾರರು ಇದ್ದರು. ಈಗ 2-3 ಸಾವಿರ ಪಟ್ಟಾದಾರರು ಇದ್ದಾರೆ. ಇದು ಕೈ ಸಿದ್ಧಾಂತದ ಬದ್ದತೆ. 94 ಸಿ ಅಡಿಯೂ‌ ಸಾವಿರಾರು ಮಂದಿಗೆ ಭೂಮಿ ಒಡೆತನ ಸಿಕ್ಕಿದೆ. ಜನರು ಇದನ್ನೆಲ್ಲ ಅರಿತಿದ್ದಾರೆ. ಜಿಲ್ಲೆಯಲ್ಲಿ ಸೋತಿದ್ದರೂ ಅಭಿವೃದ್ಧಿಯ ಇತಿಹಾಸ ಇದೆ. ಕೈ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮುಂದಿನ ಎಲೆಕ್ಷನಲ್ಲಿ ಅವಕಾಶ ಖಂಡಿತ ಇದೆ. ಸಕ್ರಿಯರನ್ನು ಗುರುತಿಸಿ, ಹೋರಾಟ ಛಾತಿ ಇರೋರಿಗೆ‌ ಟಿಕೆಟ್ ನೀಡಿದರೆ ಖಂಡಿತ ಗೆಲ್ಲಲಿದ್ದೇವೆ. ಸಮರ್ಥರು ಖಂಡಿತಾ ಇದ್ದಾರೆ. ನಾನು ಕಟ್ಟಾ ಕಾಂಗ್ರೆಸಿಗ, ಕೈ ನನ್ನ ಧರ್ಮ, ಏನನ್ನೇ ಬಿಟ್ಟರೂ ಕೈ ಬಿಡೋದೆ ಇಲ್ಲ. 9 ಸಾರಿ ನಿಲ್ಲಿಸಿದ್ದೇ ಅತಿ ದೊಡ್ಡ ಅವಕಾಶ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಪರ್ಧಿಸುವ ಅವಕಾಶ ಪಡೆದವರಲ್ಲಿ ನಾನೂ ಒಬ್ಬ. ಸೋತಿದ್ದರೂ ನಾನೂ, ಕಾರ್ಯಕರ್ತರು ಸಕ್ರಿಯರಾಗೇ ಇದ್ದೇವೆ. ಸೋಲು ಅಸೆಂಬ್ಲಿಯಲ್ಲಿ ಆದರೂ ಸ್ಥಳೀಯ ಚುನಾವಣೆಯಲ್ಲಿ‌ ಬಿಜೆಪಿಗಿಂತ ಮುಂದೆ ಇದ್ದೇವೆ. ಜನ ಕೈ ಹಿಡಿದಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಶಿ, ವಿಶ್ವಾಸ್‌ ದಾಸ್, ‌ಕೃಪಾ ಆಳ್ವ, ಮಮತಾ ಗಟ್ಟಿ, ಫರ್ಝಾನ, ಅಪ್ಪಿ, ಸತ್ಯನಾರಾಯಣ, ಗಫೂರ್‌, ಪಿ ವಿ ಮೋಹನ್‌, ಶಾಲೆಟ್‌ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here