ನ್ಯಾಯಾಧೀಶರಿಗೆ ಅನ್ಯಾಯ-ಜಡ್ಜ್‌ ಬ್ಯಾಂಕ್‌ ಖಾತೆಗೆ ಕನ್ನ ಹಾಕಿದ ಸೈಬರ್ ವಂಚಕರು-ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ನ್ಯಾಯಾಧೀಶರು

ಮಂಗಳೂರು: ಸೈಬರ್ ಕಳ್ಳರ ವಂಚನೆಗೆ ಸ್ವತಃ ನ್ಯಾಯಾಧೀಶರೇ ತುತ್ತಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮರುಳು ಮಾತಿಗೆ ಒಳಗಾಗಿ ನ್ಯಾಯಾಧೀಶರು ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಳೆದುಕೊಂಡಿದ್ದು, ಸೈಬರ್ ವಂಚಕರ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಳಗಾವಿಯ ಕೆ ಇ ಟಿ ನ್ಯಾಯಪೀಠದ ಹಿರಿಯ ನ್ಯಾಯಾಧೀಶರೊಬ್ಬರು ವಂಚನೆಗೊಳಗಾಗಿದ್ದಾರೆ. ತಮ್ಮ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂಬ ನಕಲಿ ಸಂದೇಶವನ್ನು ಸೈಬರ್ ವಂಚಕರು ನ್ಯಾಯಾಧೀಶರ ಮೊಬೈಲ್ ಗೆ ಕಳಿಸಿದ್ದರು. ಇದನ್ನು ನಂಬಿದ ನ್ಯಾಯಾಧೀಶರು ಸಂದೇಶದಲ್ಲಿದ್ದ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಬ್ಯಾಂಕಿನ ಕಸ್ಟಮರ್ ಕೇರ್ ಅಧಿಕಾರಿ ಎಂದು ಪರಿಚಯಿಸಿಕೊಂಡ ವಂಚಕ, ನ್ಯಾಯಾಧೀಶರಿಂದ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಉಪಾಯವಾಗಿ ಪಡೆದುಕೊಂಡಿದ್ದಾನೆ. ಬಳಿಕ ವ್ಯವಸ್ಥಿತವಾಗಿ ನ್ಯಾಯಾಧೀಶರ ಒಂದು ಖಾತೆಯಿಂದ 4000 ಹಾಗೂ ಇನ್ನೊಂದು ಖಾತೆಯಿಂದ 40,000 ರೂಪಾಯಿಯನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ನ್ಯಾಯಾಧೀಶರಿಗೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಧೀಶರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here