ಕೂದಲು ನೀಡಿದ ಸಾಕ್ಷ್ಯ-ವೇಶ್ಯೆಯನ್ನು 140 ಬಾರಿ ಇರಿದು ಕೊಂದ ಆರೋಪಿಗೆ 30 ವರ್ಷದ ಬಳಿಕ ಶಿಕ್ಷೆ ಪ್ರಕಟ-ಜೈಲು ಸೇರಿದ ಭಾರತೀಯ ಸಂದೀಪ್‌ ಪಾಟೀಲ್

ಮಂಗಳೂರು(ಲಂಡನ್): ಸೆಕ್ಸ್ ವರ್ಕರ್ ಅಥವಾ ಲೈಂಗಿಕ ಕಾರ್ಯಕರ್ತೆಯನ್ನು 140 ಬಾರಿ ಇರಿದು ಕೊಂದ ಭಾರತೀಯ ಮೂಲದ ವ್ಯಕ್ತಿಗೆ ಘಟನೆ ನಡೆದು 30 ವರ್ಷಗಳ ನಂತರ ಜೀವಾವಧಿ ಶಿಕ್ಷೆಯಾಗಿದೆ. ಆರೋಪಿ 51 ವರ್ಷದ ಸಂದೀಪ್ ಪಟೇಲ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಲಂಡನ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಘಟನೆ ನಡೆದ ಸ್ಥಳದಲ್ಲಿ ಪತ್ತೆಯಾದ ಸಂದೀಪ್ ಪಟೇಲ್ ಬಿದ್ದಿದ್ದ ಆತನ ಒಂದು ತಲೆಕೂದಲಿನ ಎಳೆಯಿಂದಾಗಿ ಈ ಪ್ರಕರಣದಲ್ಲಿ ಈತನ ಕೈವಾಡವಿರುವುದು ಪತ್ತೆಯಾಗಿತ್ತು.‌

ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದ ಮರೀನಾ ಕೊಪ್ಪೆಲ್ ಎಂಬಾಕೆಯನ್ನು ಸಂದೀಪ್ ಪಟೇಲ್ ಬರೋಬ್ಬರಿ 140 ಬಾರಿ ಇರಿದು ಭಯಾನಕವಾಗಿ ಹತ್ಯೆ ಮಾಡಿದ್ದ. ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಪ್ರದೇಶದಲ್ಲಿದ್ದ, ಮರೀನಾ ಕೊಪ್ಪೆಲ್ ಫ್ಲಾಟ್‌ನಲ್ಲಿಯೇ ಈ ಕೊಲೆ ನಡೆದಿತ್ತು. 1994ರಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಲ್ಡ್ ಬೈಲೇ ನ್ಯಾಯಾಲಯ ಈ ತೀರ್ಪು ನೀಡಿದೆ. ಮರೀನಾ ಕೊಪ್ಪೆಲ್ ಧರಿಸಿದ್ದ ಉಂಗುರದಲ್ಲಿದ್ದ ಆರೋಪಿಯ ತಲೆಕೂದಲಿನ ಎಳೆಯೊಂದರ ಮೇಲೆ ಫೊರೆನ್ಸಿಕ್ಸ್ ತಂಡವು ನಡೆಸಿದ ವಿನೂತನ ಪರೀಕ್ಷೆಗಳಿಂದಾಗಿ ಅಂತಿಮವಾಗಿ ಸಂದೀಪ್ ಪಟೇಲ್ ಅಪರಾಧಿ ಎಂದು ಸಾಬೀತಾಗಿದೆ.

ಕೊಲೆಯಾದ ಸಮಯದಲ್ಲಿ ಮರೀನಾಗೆ 39 ವರ್ಷ ವಯಸ್ಸಾಗಿತ್ತು. ಸೆಕ್ಸ್ ವರ್ಕರ್ ಅಥವಾ ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದ ಮರೀನಾ ಮಸಾಜ್ ಸೇವೆ ನೀಡುತ್ತಿದ್ದಳು. ತನ್ನ ದುಡಿಮೆಯಿಂದ ಆಕೆ ಕೊಲಂಬಿಯಾದಲ್ಲಿದ್ದ ತನ್ನ ಇಬ್ಬರು ಮಕ್ಕಳಿರುವ ಕುಟುಂಬವನ್ನು ಸಲಹುತ್ತಿದ್ದಳು ಎಂದು ನ್ಯಾಯಾಲಯ ಹೇಳಿದೆ. 1994 ರ ಆಗಸ್ಟ್ 8 ರಂದು ಮರೀನಾ ಸಂವಹನಕ್ಕೂ ಸಿಗದ ಹಿನ್ನೆಲೆಯಲ್ಲಿ ಚಿಂತಿತನಾಗಿದ್ದ ಆಕೆಯ ಪತಿ ಆಕೆ ವಾಸ ಮಾಡುತ್ತಿದ್ದ ಫ್ಲಾಟ್‌ಗೆ ಹೋಗಿ ನೋಡಿದಾಗ ಅಲ್ಲಿ ರಕ್ತದ ಮಡುವಿನಲ್ಲಿ ನಿರ್ಜೀವವಾಗಿ ಬಿದ್ದಿದ್ದ ಮರೀನಾರನ್ನು ನೋಡಿದ್ದರು. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದರು. ಅಪರಾಧ ನಡೆದ ಸ್ಥಳದಲ್ಲಿ ಮರೀನಾ ಕೈನಲ್ಲಿದ್ದ ಉಂಗುರದಲ್ಲಿದ್ದ ಸಣ್ಣ ಕೂದಲಿನ ಎಳೆಯೊಂದು ಕೊಲೆ ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು. ಅಲ್ಲದೇ ಅಲ್ಲಿದ್ದ ಪ್ಲಾಸ್ಟಿಕ್ ಶಾಪಿಂಗ್ ಬ್ಯಾಗ್‌ನಲ್ಲಿ ಸಂದೀಪ್ ಪಟೇಲ್ ಬೆರಳುಗಳ ಗುರುತುಗಳಿದ್ದವು. ಆ ಸಮಯದಲ್ಲಿ ಪಟೇಲ್‌ಗೆ 21 ವರ್ಷವಾಗಿದ್ದು, ಆತ ಕೆಲಸ ಮಾಡುತ್ತಿದ್ದ ಸ್ಥಳದಿಂದ ಬಂದಂತಹ ಬ್ಯಾಗ್ ಆದಾದ ಕಾರಣ ಅದರಲ್ಲಿ ಆತನ ಫಿಂಗರ್ ಪ್ರಿಂಟ್ ಸಾಮಾನ್ಯ ಎಂದು ಈ ಬ್ಯಾಗ್‌ನ ಸಾಕ್ಷ್ಯ ಅಷ್ಟೊಂದು ಮಹತ್ವ ಪಡೆದಿರಲಿಲ್ಲ, ಹೀಗಾಗಿ ಹಲವು ವರ್ಷಗಳ ಕಾಲ ಆರೋಪಿಯ ಸುಳಿವಿಲ್ಲದೇ ಕೇಸ ಪರಿಹಾರ ಕಾಣದೇ ಉಳಿದಿತ್ತು. ಆದರೆ 2008ರಲ್ಲಿ ಮರೀನಾ ಅವರ ಕೈನಲ್ಲಿದ್ದ ಉಂಗುರದಲ್ಲಿ ಸಿಲುಕಿದ್ದ ಕೂದಲೆಳೆಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. 2022ರಲ್ಲಷ್ಟೇ ಈ ಕೂದಲಿನ ಡಿಎನ್‌ಎ ಪರೀಕ್ಷೆಗೆ ಅನುಮತಿ ಸಿಕ್ಕಿತ್ತು. ಪರೀಕ್ಷೆಯ ಬಳಿಕ ಈ ಕೂದಲು ಸಂದೀಪ್ ಪಟೇಲ್‌ಗೆ ಸಂಬಂಧಿಸಿದ್ದು ಎಂದು ಸಾಬೀತಾಗಿತ್ತು. ಇದಾದ ನಂತರ ಕಳೆದ ವರ್ಷ ಜನವರಿಯಲ್ಲಿ ಪಟೇಲ್‌ನನ್ನು ಪೊಲೀಸರು ಬಂಧಿಸಿದ್ದರು. ಘಟನೆ ನಡೆದ ಬರೋಬ್ಬರಿ 30 ವರ್ಷಗಳ ನಂತರ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು. ಆರೋಪಿಗೆ ಶಿಕ್ಷೆಯಾಗಿದೆ.  .

LEAVE A REPLY

Please enter your comment!
Please enter your name here