ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ‌ ಆಕಸ್ಮಿಕ ಬೆಂಕಿ-ಹೊತ್ತಿ ಉರಿದ ಎರಡು ಮಳಿಗೆಗಳು-ಅಪಾರ ಪ್ರಮಾಣದ ನಷ್ಟ

ಮಂಗಳೂರು(ಕಾಸರಗೋಡು): ಕಾಸರಗೋಡು ನಗರದ ಎರಡು ಮಳಿಗೆಗಳು ಅಗ್ನಿಗಾಹುತಿಯಾದ ಘಟನೆ ಫೆ.22ರ ಬೆಳಿಗ್ಗೆ ನಗರದ ಹಳೆ ಬಸ್ಸು ನಿಲ್ದಾಣ ಸಮೀಪ ನಡೆದಿದೆ.

ನಗರದ ಹಳೆ ಬಸ್ಸು ನಿಲ್ದಾಣ ಸಮೀಪದ ಸರಕು ಸಾಮಾಗ್ರಿ, ಮೊಬೈಲ್ ಹಾಗೂ ವಾಚ್ ವರ್ಕ್ಸ್ ಮಳಿಗೆಯಲ್ಲಿ ಈ ಅನಾಹುತ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು, ಅಂಗಡಿಗಳಲ್ಲಿದ್ದ ಸಾಮಾಗ್ರಿಗಳು ಸುಟ್ಟುಕರಕಲಾಗಿದೆ. ಮೊಬೈಲ್ ಮಳಿಗೆ ಮತ್ತು  ಸರಕು ಸಾಮಾಗ್ರಿ ಮಳಿಗೆಯಲ್ಲಿ ಒಟ್ಟು ಸುಮಾರು 15 ಲಕ್ಷದಷ್ಟು ರೂ.ನಷ್ಟವುಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here