ಮಂಗಳೂರು(ಬೆಂಗಳೂರು): ಆಟವಾಡುವಾಗ ಆಯತಪ್ಪಿ ನೀರಿನ ಸಂಪ್ಗೆ ಬಿದ್ದ ಎರಡೂವರೆ ವರ್ಷದ ಮಗುವನ್ನು ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ರಕ್ಷಿಸಿದ್ದಾರೆ.
ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್ನ ಮನೆಯೊಂದರಲ್ಲಿ ಆಟವಾಡುವಾಗ ಆಯತಪ್ಪಿ ಎರಡೂವರೆ ವರ್ಷದ ಮಗು 10 ಅಡಿಯ ನೀರಿನ ಸಂಪ್ಗೆ ಬಿದ್ದಿದೆ. ಕೂಡಲೇ ಚೀರಾಡಿದೆ. ಇದೇ ಸಂದರ್ಭದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಚೀರಾಟದ ಶಬ್ದ ಗ್ರಹಿಸಿ ಸಂಪ್ ಬಳಿ ಬಂದಿದ್ದಾರೆ. ಮಗು ಬಿದ್ದಿರುವುದನ್ನು ಕಂಡು ಕೂಡಲೇ ಸಮವಸ್ತ್ರದಲ್ಲೇ ನೀರಿನ ಸಂಪ್ಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಮಗುವನ್ನು ರಕ್ಷಿಸಿದ್ದ ಟ್ರಾಫಿಕ್ ಪಿಎಸ್ಐಗೆ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.