ತೋಟದ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ-ವಿಚಾರಣೆ ನಡೆಸುತ್ತಿರುವ ಬಿಡದಿ ಪೊಲೀಸ್-ಅನಾವರಣವಾಗಲಿದೆ ತಲೆಬುರುಡೆ ರಹಸ್ಯ

ಮಂಗಳೂರು(ರಾಮನಗರ): ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು ಪತ್ತೆಯಾಗಿವೆ. ಬಲರಾಮ್ ಎಂಬ ವ್ಯಕ್ತಿ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಲರಾಮ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಮಹಾ ಶಿವರಾತ್ರಿಯ ಅಮಾವಾಸ್ಯೆ ಮುಗಿದಿದೆ. ರಾಮನಗರದ ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ಬಲರಾಮ್ ಎಂಬ ವ್ಯಕ್ತಿ ರಾತ್ರಿ ವೇಳೆ ಸ್ಮಶಾನದಲ್ಲಿ ಪೂಜೆ ಮಾಡಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಮಶಾನಕ್ಕೆ ಬಂದ ಬಿಡದಿ ಪೊಲೀಸರು ವಿಚಾರಣೆ ನಡೆಸಿ ಬಲರಾಮ್​ನನ್ನು ವಶಕ್ಕೆ ಪಡೆದಿದ್ದಾರೆ. ಬಲರಾಮ್ ತೋಟದ ಮನೆಯಲ್ಲಿ ಅನೇಕ ಮಾನವರ ತಲೆ ಬುರುಡೆಗಳು ಪತ್ತೆಯಾಗಿವೆ. ನನ್ನ ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡುತ್ತಾ ಬಂದಿದ್ದೇವೆ ಎಂದು ಬಲರಾಮ್ ತಿಳಿಸಿದ್ದು ವಿಚಾರಣೆ ಮುಂದುವರೆದಿದೆ.

 

LEAVE A REPLY

Please enter your comment!
Please enter your name here