ಮಂಗಳೂರು(ದೆಹಲಿ): ಭಾರತೀಯ ಚುನಾವಣಾ ಆಯೋಗವು 18ನೇ ಲೋಕಾಸಭಾ ಚುನಾವಣಾ ದಿನಾಂಕವನ್ನು ಮಾ.16ರಂದು ಘೋಷಿಸಲಿದೆ. ಮಾ.16ರ ಶನಿವಾರ 3 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದ್ದು, ಭಾರತೀಯ ಚುನಾವಣಾ ಆಯೋಗದ ಆಯುಕ್ತರು ಲೋಕಸಭಾ ಚುನಾವಣೆ ದಿನಾಂಕ ಘೋಷಿಸಲಿದ್ದಾರೆ. ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಲಿದೆ.