ಉಡುಪಿ-ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ, ದ.ಕ-ಆರ್.ಪದ್ಮರಾಜ್ಗೆ ಟಿಕೆಟ್ ಫೈನಲ್
ಮಂಗಳೂರು(ನವದೆಹಲಿ): ಕಾಂಗ್ರೆಸ್ ಪಕ್ಷವು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಘೋಷಣೆಗೆ ಬಾಕಿಯಿದ್ದ 21 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಇಂದು ಕಾಂಗ್ರೆಸ್ ಹೈಕಮಾಂಡ್ ಬಾಕಿ ಇದ್ದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, ಘೋಷಣೆ ಮಾಡಿದೆ. ದಕ್ಷಿಣ ಕನ್ನಡ- ಆರ್. ಪದ್ಮರಾಜ್, ಉಡುಪಿ-ಚಿಕ್ಕಮಗಳೂರು- ಕೆ. ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ದಕ್ಷಿಣ- ಸೌಮ್ಯ ರೆಡ್ಡಿ, ಚಿತ್ರದುರ್ಗ- ಚಂದ್ರಪ್ಪ, ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ, ಕೊಪ್ಪಳ- ರಾಜಶೇಖರ್ ಹಿಟ್ನಾಳ್.
ಬೀದರ್- ರಾಜಶೇಖರ್ ಪಾಟೀಲ್, ಬೆಂಗಳೂರು ಕೇಂದ್ರ- ಮನ್ಸೂರ್ ಅಲಿ ಖಾನ್, ರಾಯಚೂರು- ಕುಮಾರ್ ನಾಯಕ್, ಮೈಸೂರು- ಎಂ. ಲಕ್ಷಣ್, ಬೆಂಗಳೂರು ಉತ್ತರ- ಪ್ರೊ. ರಾಜೀವ್ ಗೌಡ್, ಬಾಗಲಕೋಟೆ- ಸಂಯುಕ್ತಾ ಶಿವನಾಂದ ಪಾಟೀಲ್, ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ, ಧಾರವಾಡ- ವಿನೋದ್ ಅಸೂಟಿ, ಉತ್ತರ ಕನ್ನಡ- ಅಂಜನಿ ನಿಂಬಾಲ್ಕರ್, ದಾವಣಗೆರೆ- ಚಾಮರಾಜನಗರ- ಅಭ್ಯರ್ಥಿಗಳಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್ ಈಗಾಗಲೇ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.