ಮಂಗಳೂರು: ಕಾಂಗ್ರೆಸ್ ಸೋಲುವ ಭೀತಿಯಿಂದ ಪೊಲೀಸರ ಮೇಲೆ ಒತ್ತಡ ಹಾಕಿ ಯಾವ ತಪ್ಪೆಸಗದ ಬಜರಂಗದಳ ಕಾರ್ಯಕರ್ತರನ್ನು ಗೂಂಡಾಕಾಯ್ದೆಯಡಿ ಬಂಧಿಸುವ ಕೆಲಸ ಮಾಡುತ್ತಿದೆ ಎಂದು ಬಜರಂಗದಳ ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್ ಆರೋಪಿಸಿದ್ದಾರೆ.
ನಗರದ ಕದ್ರಿಯ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ವೇಳೆ ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಬಜರಂಗದಳವನ್ನು ಬ್ಯಾನ್ ಮಾಡುತ್ತೇನೆ ಎಂದು ಹೇಳಿತು. ಇದೀಗ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ನೂರಕ್ಕೆ ನೂರು ಸೋಲುವ ಭೀತಿಯಿದೆ. ಬಜರಂಗದಳದ ಕಾರ್ಯಕರ್ತರನ್ನು ಗಡಿಪಾರು ಮಾಡುವ ಮೂಲಕ, ಗೂಂಡಾಕಾಯ್ದೆ ಹಾಕುವ ಮೂಲಕ ಅಲ್ಪಸಂಖ್ಯಾತರು ಖುಷಿಪಟ್ಟು ತಮಗೆ ಮತಹಾಕುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಕೇಸ್ ಆಗುವುದಿಲ್ಲ. ಜೈಶ್ರೀರಾಮ್ ಘೋಷಣೆ ಕೂಗಿದವರ ಮೇಲೆ, ಕೇಸ್ ಆಗುತ್ತದೆ. ಹನುಮಾನ್ ಚಾಲೀಸ್ ಪಠಣ ಮಾಡಲಿಕ್ಕಿಲ್ಲ. ನಮಗೆ ಹಿಂದುತ್ವದ ಪರವಾದ ಸರಕಾರ ಬೇಕು. ಆದ್ದರಿಂದ ವಿಎಚ್ ಪಿ – ಬಜರಂಗದಳ ಎಲ್ಲಾ ಹಿಂದೂಗಳ ಮನೆಗೆ ಹೋಗಿ ಜಾಗೃತಿ ಮೂಡಿಸಿ ರಾಷ್ಟ್ರದ ಪರವಾಗಿ ಕೆಲಸ ಮಾಡುವ ಪಕ್ಷವನ್ನು ಗೆಲ್ಲಿಸುವ ಕಾರ್ಯ ಮಾಡುತ್ತದೆ ಎಂದರು.