ಜೀವದ ಹಂಗು ತೊರೆದು ಹೋರಾಡಿದ ತಾಯಿ, ಮಗಳು-ಆಗಂತುಕ ಪರಾರಿ

ಮಂಗಳೂರು(ಹೈದರಾಬಾದ್): ಗನ್​ ಹಿಡಿದು, ತಲೆಗೆ ಹೆಲ್ಮೆಟ್​ ಧರಿಸಿಕೊಂಡು ವ್ಯಕ್ತಿಯೊಬ್ಬ ಮನೆಗೆ ನುಗ್ಗಿದ್ದ ವೇಳೆ ತಾಯಿ, ಮಗಳು ಸೇರಿ ಹೊಡೆದು ಓಡಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ ನಗರದ ಬೇಗಂಪೇಟ್​​ನಲ್ಲಿ ನಡೆದಿದೆ.

ಬೇಗಂಪೇಟ್​ ಮನೆಯೊಂದಕ್ಕೆ ಬಂದೂಕು ಹಿಡಿದು ಅಪರಿಚಿತ ವ್ಯಕ್ತಿಯೊಬ್ಬ ನೇರ ನುಗ್ಗಿ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಆದರೆ ಮನೆಯಲ್ಲಿದ್ದ ತಾಯಿ, ಮಗಳು ಹಾಗೂ ಇನ್ನೊಬ್ಬ ಮಹಿಳೆ ದಾಳಿಕೋರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ನೆಲಕ್ಕೆ ಕೆಡವಿ ಮೊದಲು ಅವನ ಹೆಲ್ಮೆಟ್​ ತೆಗೆದಿದ್ದಾರೆ. ಬಳಿಕ ಆತನ ಕೈಯಲ್ಲಿದ್ದ ಗನ್​ ಕಸಿದುಕೊಂಡು ಪರಸ್ಪರ ಹೊಡೆದಾಡಿದ್ದಾರೆ. ಮಹಿಳೆಯರು ಮಾಡಿದ ಪ್ರತಿದಾಳಿಗೆ ಹೆದರಿದ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದಾನೆ. ಬೇಗಂಪೇಟೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು ದಾಳಿ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪರಿಚಯಸ್ಥನಿಂದಲೇ ಈ ರೀತಿಯ ದಾಳಿ ಆಗಿರಬಹುದು ಎಂದು ಬೇಗಂಪೇಟೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here