2024-2025ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವಂತಹ 2024-2025 ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿಯ ಪ್ರಕಾರ ಮೊದಲನೇ ಅವಧಿಯು 2024ರ ಮೇ 29 ರಿಂದ ಅಕ್ಟೋಬರ್ 2 ರವರೆಗೆ, ಎರಡನೇ ಅವಧಿಯು ಅಕ್ಟೋಬರ್‌ 21ರಿಂದ 2025ರ ಏಪ್ರಿಲ್‌ 10 ರವರೆಗೆ ಇರಲಿದೆ.

ಇದರ ನಡುವೆ, ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜೆ, 2025ರ ಏಪ್ರಿಲ್ 11 ರಿಂದ ಮೇ 28ರವರೆಗೆ ಬೇಸಿಗೆ ರಜೆ ನಿಗದಿ ಮಾಡಿದೆ. 244 ಶಾಲಾ ಕರ್ತವ್ಯದ ದಿನಗಳು ಇರಲಿದ್ದು, ಇದರಲ್ಲಿ ಪರೀಕ್ಷೆ ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆಗೆ 24 ದಿನಗಳು, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆಗೆ 10 ದಿನ, ಶಾಲಾ ಸ್ಥಳೀಯ ರಜೆ 4 ದಿನ, ಬೋಧನಾ ಕಲಿಕೆಗೆ 180 ದಿನಗಳು ಎಂದು ವಿಂಗಡಿಸಲಾಗಿದೆ. ಈ ವಾರ್ಷಿಕ ಮಾರ್ಗಸೂಚಿಯಲ್ಲಿ ಮಾಸಿಕ ಪಾಠ ಹಂಚಿಕೆ, ಪತ್ಯೇತರ ಚಟುವಟಿಕೆ, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆ, ಸಂಭ್ರಮ ಶನಿವಾರ ಸೇರಿ ಇತರ ಯೋಜನೆಗಳನ್ನು ನಿರ್ವಹಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here