






ಪುತ್ತೂರು:ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ 2024-25ರಿಂದ 2025-26ರ ಸಾಲಿನ 2 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಮತ ಎಣಿಕೆ ಮುಕ್ತಾಯಗೊಂಡಿದ್ದು ನೂತನ ಅಧ್ಯಕ್ಷರಾಗಿ ಜಿ.ಜಗನ್ನಾಥ ರೈ, ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಜತೆಕಾರ್ಯದರ್ಶಿಯಾಗಿ ಮಮತಾ ಸುವರ್ಣ ಬಿ.ಹಾಗೂ ಕೋಶಾಧಿಕಾರಿಯಾಗಿ ಮಹೇಶ್ ಕೆ.ಸವಣೂರು ಚುನಾಯಿತರಾಗಿದ್ದಾರೆ.ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಈಶ್ವರಮಂಗಲ ಅವಿರೋಧವಾಗಿ ಆಯ್ಕೆಯಾಗಿದ್ದರು.



ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಕಜೆ, ಜಿ.ಜಗನ್ನಾಥ ರೈ, ಸಂತೋಷ್ ಕುಮಾರ್ ಎಂ, ಉಪಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ ನಂದಿಲ, ಮೋನಪ್ಪ ಎಂ.ಅಳಿಕೆ, ಜತೆ ಕಾರ್ಯದರ್ಶಿ ಸ್ಥಾನಕ್ಕೆ ಹೀರಾ ಉದಯ್, ಮಮತಾ ಸುವರ್ಣ ಬಿ ಹಾಗೂ ಕೋಶಾಧಿಕಾರಿ ಸ್ಥಾನಕ್ಕೆ ಮಹೇಶ್ ಕೆ. ಸವಣೂರು ಮತ್ತು ಚಿದಾನಂದ ರೈ. ಕೊಡಿಂಬಾಡಿ ಅವರು ಚುನಾವಣಾ ಕಣದಲ್ಲಿದ್ದರು.ಮತದಾನ ಪ್ರಕ್ರಿಯೆ ಬೆಳಿಗ್ಗೆ 10ರಿಂದ ಸಂಜೆ 4ರ ತನಕ ಪರಾಶರ ಸಭಾಭವನದಲ್ಲಿ ನಡೆಯಿತು.ಚುನಾವಣಾಧಿಕಾರಿಗಳಾಗಿ ಕೆ.ಭಾಸ್ಕರ್ ಕೋಡಿಂಬಾಳ, ಎನ್.ಕಿಶೋರ್ ಕೊಳತ್ತಾಯ, ದೀಪಕ್ ಬೊಳುವಾರು ಕಾರ್ಯನಿರ್ವಹಿಸಿದ್ದರು.















