ಅಬ್ಕೆ ಬಾರ್‌ ಚಾರ್‌ ಸೋ ಪಾರ್‌ ಗ್ಯಾರಂಟಿ-ಹತಾಶೆಯಿಂದ ಮತಯಾಚನೆ ಮಾಡದಂತೆ ನಮ್ಮನ್ನು ಕಾಂಗ್ರೆಸ್‌ ನವರು ತಡೆದಿದ್ದಾರೆ-ಶಾಸಕ ವೇದವ್ಯಾಸ್‌ ಕಾಮತ್‌

ಮಂಗಳೂರು: ಯಾವುದೇ ದೇವಸ್ಥಾನದ ಒಳಗೆ ಹೋಗಿ ಮತಯಾಚನೆ ಮಾಡುವ ಪರಿಸ್ಥಿತಿ ನಮಗೆ ಬಂದಿಲ್ಲ. ಸಾಕಷ್ಟು ಚುನಾವಣೆಗಳನ್ನು ಕಂಡಿದ್ದೇವೆ. ಅದರ ಅನುಭವವು ಇದೆ. ದೇವಸ್ಥಾನದಲ್ಲಿ 10-50 ಸಿಸಿಟಿವಿ ಇದೆ. ಅದನ್ನು ಪರಿಶೀಲನೆ ಮಾಡಲಿ. ನಾನು ಸೇರಿದಂತೆ ಯಾವುದೇ ಕಾರ್ಯಕರ್ತ ಮತಯಾಚನೆ ಮಾಡುವುದು ಕಂಡುಬಂದರೆ ಯಾವುದೇ ಕಾನೂನು ಕ್ರಮಕ್ಕೆ ತಯಾರಿದ್ದೇನೆ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದ್ದಾರೆ.

ನಿನ್ನೆ ಚಿಲಿಂಬಿಯ ಸಾಯಿ ಮಂದಿರದ ಬಳಿ ಮತಯಾಚನೆ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ಬಗ್ಗೆ ಸ್ಪಷ್ಟೀಕರಣ ನೀಡಿದ ಶಾಸಕ ಕಾಮತ್‌ ಮೋದಿ ರೋಡ್‌ ಶೋ ನಡೆಸಿದ ಚಿಲಿಂಬಿ ಭಾಗದ ಈ ರಸ್ತೆಯಲ್ಲಿ ಅಶ್ವಿನ್‌ ಕೊಟ್ಟಾರಿ ಮತ್ತು ಸಂಗಡಿಗರು ಮತಯಾಚನೆ ಮಾಡುವ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಮತಯಾಚನೆ ಮಾಡದಂತೆ ತಡೆದಿದ್ದಾರೆ. ಈ ವೇಳೆಗೆ ಸರಿಯಾಗಿ ನಾನೂ ಅಲ್ಲಿಗೆ ತಲುಪಿದ್ದು, ಇದು ಸಾರ್ವಜನಿಕ ರಸ್ತೆ ಇಲ್ಲಿ ಯಾಕೆ ಮತಯಾಚನೆ ಮಾಡಬಾರದು ಎಂದು ಪ್ರಶ್ನಿಸಿದ್ದೆ. ದೇವಸ್ಥಾನದ ಕಾರ್ಯಕ್ರಮದವರಿಗೆ ರಸ್ತೆಯಲ್ಲಿ ನಮ್ಮನ್ನು ತಡೆಯುವ ಅವಶ್ಯಕತೆ ಏನಿತ್ತು ಎಂದು ಶಾಸಕ ಕಾಮತ್‌ ಪ್ರಶ್ನಿಸಿದ್ದಾರೆ. ಮಂಗಳೂರಿಗೆ ಪ್ರಧಾನಿ ಮೋದಿ ಬಂದು ಹೋದ ಮೇಲೆ ಕಾಂಗ್ರೆಸ್‌ ನವರು ಹತಾಶರಾಗಿದ್ದಾರೆ. ಮುನ್ನೆಯ ಜನ ನೋಡಿ ಕಾಂಗ್ರೆಸ್‌ ಸೋಲೊಪ್ಪಿಕೊಂಡಿದೆ. ಅಬ್ಕೆ ಬಾರ್‌ ಚಾರ್‌ ಸೋ ಪಾರ್‌ ಮೋದಿ ಗ್ಯಾರಂಟಿಯಾಗಿದೆ. ಹತಾಶರಾಗಿ ಜನರ ಮನಸ್ಸು ಪರಿವರ್ತನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಘಟನೆ ಬಗ್ಗೆ ಚುನಾವಣಾ ಆಯೋಗ ನನಗೆ ನೋಟೀಸ್‌ ನೀಡಿದ್ದು ಗೊಂದಲಕ್ಕೆ ಕಾರಣವಾಗಿರುವ ಬಗ್ಗೆ ಉತ್ತರಿಸುವಂತೆ ಹೇಳಿದ್ದಾರೆ. ಅದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮತಯಾಚನೆ ಮಾಡಿದ್ದೀರಿ ಎಂದು ಉಲ್ಲೇಖಿಸಿದ್ದಾರೆ. ಚುನಾವಣಾ ಆಯೋಗವೇ ಸಾರ್ವಜನಿಕ ಸ್ಥಳವೆಂದು ಒಪ್ಪಿಕೊಂಡಿದೆ. ಪೂರಕ ಸರಕಾರ ಇದೆ ಎಂದು ಎಫ್‌ ಐ ಆರ್‌ ಮಾಡಿದ್ರೂ ನಾವು ಹೆದರಲ್ಲ, ಉತ್ತರ ಕೊಡುತ್ತೇವೆ ಎಂದವರು ಹೇಳಿದರು.

LEAVE A REPLY

Please enter your comment!
Please enter your name here