



ಮಂಗಳೂರು(ಹುಬ್ಬಳ್ಳಿ): ಕೊಲೆಯಾದ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಕೇಳಿದ್ದಾರೆ.







ನಗರದ ಬಿಡ್ನಾಳದ ನೇಹಾ ನಿವಾಸಕ್ಕೆ ಎಚ್.ಕೆ. ಪಾಟೀಲ ಅವರು ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ, ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿ ‘ಐ ಆ್ಯಮ್ ವೆರೀ ಸಾರಿ, ನಾವು ನಿಮ್ಮ ಜೊತೆ ಇರುತ್ತೇವೆ’ ಎಂದು ಹೇಳಿದ್ದಾರೆ.’ಮುಖ್ಯಮಂತ್ರಿ ಅವರ ಮಾತು ಒಂದಿಷ್ಟು ಸಮಾಧಾನ ತಂದಿದೆ’ ಎಂದು ನಿರಂಜನಯ್ಯ ಹಿರೇಮಠ ಹೇಳಿದ್ದಾರೆ.















