ಮಲೇಷ್ಯಾದಲ್ಲಿ ಎರಡು ಮಿಲಿಟರಿ ಹೆಲಿಕಾಪ್ಟ‌ರ್ ಪತನ-10 ಮಂದಿ ಸಾವು-ವಿಡಿಯೋ ವೈರಲ್

ಮಂಗಳೂರು(ಮಲೇಷ್ಯಾ): ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ಪೆರಾಕ್ ನ ಲುಮುಟ್ ನಲ್ಲಿ ಮಂಗಳವಾರ ನಡೆದಿದೆ.

ಫ್ರೀ ಮಲೇಷ್ಯಾ ಟುಡೇ ವರದಿಯ ಪ್ರಕಾರ, ಪೆರಾಕ್ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಇಲಾಖೆ ಈ ಘಟನೆಯನ್ನು ದೃಢಪಡಿಸಿದೆ ಮತ್ತು ವೈದ್ಯಕೀಯ ಅಧಿಕಾರಿಗಳು ಸಾವುಗಳನ್ನು ದೃಢಪಡಿಸಿದ್ದಾರೆ. ನೌಕಾಪಡೆಯ 90 ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕಾಗಿ ಪೂರ್ವಾಭ್ಯಾಸ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here