ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.38.23ರಷ್ಟು ಮತದಾನವಾಗಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇಕಡಾವಾರು 30.10ರಷ್ಟು ಮತದಾನವಾಗಿದ್ದು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ.32.25ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ.36.9 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ.31.51ರಷ್ಟು ಮತದಾನವಾಗಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಶೇ.39.57, ಚಿತ್ರದುರ್ಗದಲ್ಲಿ ಶೇ.39.5, ಹಾಸನ ಶೇ.40.99, ಮಂಡ್ಯ ಶೇ.40.70, ಉಡುಪಿ-ಚಿಕ್ಕಮಗಳೂರಿನಲ್ಲಿ ಶೇ.46.43ರಷ್ಟು ಮತದಾನವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಶೇ.39.85, ದಕ್ಷಿಣ ಕನ್ನಡದಲ್ಲಿ 48.10, ಮೈಸೂರು-ಕೊಡಗು ಶೇ.48.50 ಹಾಗೂ ಕೋಲಾರ ಶೇ.38.42ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಶೇಕಡವಾರು ಮತದಾನದಲ್ಲಿ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ಮೈಸೂರು-ಕೊಡಗು ಮೊದಲ ಸ್ಥಾನದಲ್ಲಿದೆ.
ದ.ಕನ್ನಡ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1ರ ವರೆಗಿನ ಶೇಕಡವಾರು ಮತದಾನದ ವಿವರ ಇಂತಿದೆ.
ಬೆಳ್ತಂಗಡಿ – 50.01
ಮೂಡಬಿದ್ರಿ – 45.10
ಮಂಗಳೂರು ನಗರ ಉತ್ತರ – 46.88
ಮಂಗಳೂರು ನಗರ ದಕ್ಷಿಣ- 41.62
ಮಂಗಳೂರು- 47.83
ಬಂಟ್ವಾಳ -50.13
ಪುತ್ತೂರು – 51.01
ಸುಳ್ಯ – 53.31