



ಮಂಗಳೂರು/ಪುತ್ತೂರು: ಮತದಾನದ ಅವಧಿ 6ಗಂಟೆಗೆ ಮುಕ್ತಾಯಗೊಂಡರೂ ಆ ವೇಳೆಗೆ ಸರತಿಯ ಸಾಲಿನಲ್ಲಿರುವವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. 6ಗಂಟೆ ವೇಳೆಗೆ ಸರತಿಯ ಸಾಲಿನಲ್ಲಿದ್ದು, ಮತ ಚಲಾಯಿಸಲು ಬಾಕಿ ಇರುವ ಮತದಾರರಿಗೆ ಟೋಕನ್ ನೀಡಲಾಗುವುದು. ಟೋಕನ್ ಪಡೆದ ಎಲ್ಲರಿಗೂ ಮತದಾನಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ನೀಡಿರುವ ಧ್ವನಿ ಸಂದೇಶ ಇಲ್ಲಿದೆ.



















