



ಮಂಗಳೂರು(ಮಡಿಕೇರಿ): ಕ್ರಿಕೆಟ್ ಪಂದ್ಯಾವಳಿಯ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟ ಘಟನೆ ಕೊಡಗಿನ ಮೂರ್ನಾಡು ಪಟ್ಟಣದಲ್ಲಿ ಶುಕ್ರವಾರ(ಮೇ.10) ರಾತ್ರಿ ನಡೆದಿದೆ.







ಮೂರ್ನಾಡು ನಿವಾಸಿ ಆರಿಫ್ (34) ಮೃತಪಟ್ಟ ಯುವಕ. ಮೂರ್ನಾಡಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯೊಂದಕ್ಕೆ ಸಂಬಂಧಿಸಿ ಆರಿಫ್ ಸೇರಿದಂತೆ ಸಂಘಟಕ ಯುವಕರು ಶುಕ್ರವಾರ ರಾತ್ರಿ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಬ್ಯಾನರ್ ಕಟ್ಟುತ್ತಿದ್ದ ವೇಳೆ ಆರಿಫ್ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯ ಸ್ಪರ್ಶಕ್ಕೆ ಒಳಗಾಗಿ ಉಸಿರು ಚೆಲ್ಲಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಯುವಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಮೂರ್ನಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















