ಮಂಗಳೂರು (ಬೆಂಗಳೂರು): ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದ ಕೆಆರ್ ನಗರ ಸಂತ್ರಸ್ತೆಯ ಅಪಹರಣದಲ್ಲಿ ಸಿಲುಕಿರುವ ಶಾಸಕ ರೇವಣ್ಣಗೆ ಸ್ಪೆಷಲ್ ಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಎಸ್‌ಐಟಿ ಪರ ವಕೀಲರಾದ ಜಯ್ನಾ ಕೊಠಾರಿ ಮತ್ತು ರೇವಣ್ಣ ಪರ ವಕೀಲ ಸಿ.ವಿ ನಾಗೇಶ್ ವಾದವನ್ನು ಆಲಿಸಿದ ನ್ಯಾಯಾಧೀಶರು ರೇವಣ್ಣ ಅವರಿಗೆ ಐದು ಲಕ್ಷ ಬಾಂಡ್ ನೊಂದಿಗೆ ಜಾಮೀನು ಮಂಜೂರು ಮಾಡಿದ್ದಾರೆ.