ಬಿರುಗಾಳಿಗೆ ಮುಂಬೈನಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕ ಕುಸಿತ-ಮೃತರ ಸಂಖ್ಯೆ 14ಕ್ಕೆ ಏರಿಕೆ-74 ಜನರಿಗೆ ಗಾಯ

ಮಂಗಳೂರು(ಮುಂಬೈ): ಸೋಮವಾರ ವಾಣಿಜ್ಯ ನಗರಿ ಮುಂಬೈನಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕವೊಂದು ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದು ಸಂಭವಿಸಿದ ಅವಘಡದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 74 ಜನ ಗಾಯಗೊಂಡಿದ್ದಾರೆ.

ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಈ ವಿಷಯ ಖಚಿತಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ 35 ಜನ ಬಿಡುಗಡೆಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪರಿಹಾರ ಕಾರ್ಯಾಚರಣೆ ಮಂಗಳವಾರ ಬೆಳಿಗ್ಗೆಯೂ ಮುಂದುವರೆದಿತ್ತು ಎಂದು ತಿಳಿಸಿದ್ದಾರೆ. ಮಧ್ಯಾಹ್ನ ಇದ್ದಕ್ಕಿದ್ದಂತೆ ದೂಳು ಸಹಿತ ಭಾರಿ ಬಿರುಗಾಳಿ ಬೀಸಿತು. ಈ ವೇಳೆ ಘಾಟ್‌ಕೋಪರ್‌ ಪ್ರದೇಶದ ಚೆಡ್ಡಾನಗರದಲ್ಲಿ 100 ಅಡಿ ಎತ್ತರದ ಜಾಹೀರಾತು ಫಲಕವು ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದಿತ್ತು. ಸ್ಥಳದಲ್ಲಿದ್ದ, ಹಲವರು ಫಲಕದಡಿ ಸಿಲುಕಿಕೊಂಡಿ ದ್ದರು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೋರು ಮಳೆ ಸುರಿದ ಪರಿಣಾಮ ಮುಂಬೈ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು.

ಮುಂಬೈ ವಿಮಾನ ನಿಲ್ದಾಣದಲ್ಲಿ ಸೋಮವಾರ ವಿಮಾನ ಕಾರ್ಯಾಚರಣೆ ಯನ್ನು ಒಂದು ಗಂಟೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ನಗರದಲ್ಲಿ ರೈಲು ಸಂಚಾರದಲ್ಲೂ ವ್ಯತ್ಯಯವಾಯಿತು. ಪ್ರತಿಕೂಲದ ಹವಾಮಾನದಿಂದಾಗಿ 15 ವಿಮಾನಗಳನ್ನು ಬೇರೆ ನಿಲ್ದಾಣ ಗಳತ್ತ ಮಾರ್ಗ ಬದಲಾಯಿಸಲು ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯು ಸಂಜೆ 5.30ಕ್ಕೆ ಪುನರಾರಂಭಗೊಂಡಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ಪೂರ್ವ ಅಂಧೇರಿ ಮೆಟ್ರೊ ನಿಲ್ದಾಣಗಳ ನಡುವೆ ಮಾರ್ಗ ದಲ್ಲಿ ತಂತಿಯ ಮೇಲೆ ಬ್ಯಾನರ್‌ ಒಂದು ಬಿದ್ದಿದ್ದರಿಂದ ಈ ಮಾರ್ಗದ ಮೆಟ್ರೊ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಠಾಣೆ ಮತ್ತು ಮುಲುಂಡ್‌ ರೈಲು ನಿಲ್ದಾಣಗಳ ಮಾರ್ಗ ಮಧ್ಯೆ ಗಾಳಿಯ ರಭಸಕ್ಕೆ ಕಂಬವೊಂದು ಬಾಗಿದ ಪರಿಣಾಮ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಕೇಂದ್ರೀಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಠಾಣೆ ಜಿಲ್ಲೆಯ ಕಲ್ವಾ ಮತ್ತು ಇತರ ಪ್ರದೇಶಗಳಲ್ಲಿ ಮಳೆಯಿಂದಾಗಿ ವಿದ್ಯುತ್‌ ವ್ಯತ್ಯಯವಾದ ವರದಿಯಾಗಿದೆ. ಹಲವೆಡೆ ಮರಗಳು ಉರುಳಿವೆ. ದಾದರ್‌, ಕುರ್ಲಾ, ಮಾಹಿಮ್‌, ಘಾಟ್‌ಕೋಪರ್‌, ಮುಲುಂಡ್‌ ಮತ್ತು ವಿಖ್ರೋಲಿ ನಗರಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಠಾಣೆ, ಅಂಬರ್‌ ನಾಥ್, ಬದ್ಲಾಪುರ್‌, ಕಲ್ಯಾಣ್ ಮತ್ತು ಉಲ್ಲಾಸ್‌ನಗರದಲ್ಲಿಯೂ ಬಿರುಸಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://youtu.be/DbGj5XmXw7E.3

 

LEAVE A REPLY

Please enter your comment!
Please enter your name here