ಮಂಗಳೂರು(ಹೊಸದಿಲ್ಲಿ): ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿ ಇರುವ ಕಟ್ಟಡಕ್ಕೆ ಬೆಂಕಿ ತಗುಲಿಕೊಂಡಿದ್ದು, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.
ಐಟಿ ಇಲಾಖೆಯ ಕಚೇರಿ ಇರುವ ಸೆಂಟ್ರಲ್ ರೆವಿನ್ಯೂ ಕಟ್ಟಡದಲ್ಲಿ ಮಧ್ಯಾಹ್ನ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಸಾವು ನೋವಿನ ವರದಿಗಳಾಗಿಲ್ಲ. ಮಧ್ಯಾಹ್ನ 3.07 ಗಂಟೆಗೆ ನಮಗೆ ಬೆಂಕಿ ಬಿದ್ದಿರುವ ಮಾಹಿತಿ ದೊರೆಯಿತು. ಬೆಂಕಿ ನಂದಿಸುವ 21 ಟ್ಯಾಂಕರ್ ವಾಹನಗಳನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Breaking:
A fire broke out inside the Income Tax CR Building in ITO area, officials of #Delhi Fire Services said.
"We received a call at 3.07 pm, regarding a fire in the #IncomeTax CR building. We have rushed a total of 21 fire tenders. We have also informed the local police… pic.twitter.com/yGseqsjx7j
— Yuvraj Singh Mann (@yuvnique) May 14, 2024