8 ಬಾರಿ ಮತ ಚಲಾಯಿಸಿದ ಯುವಕ-ವೀಡಿಯೋ ವೈರಲ್-ಬಂಧನ, ಎಫ್ ಐ ಆರ್ ದಾಖಲು

ಮಂಗಳೂರು(ಲಕ್ನೋ): ಉತ್ತರಪ್ರದೇಶದ ಫರೂಖಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಯುವಕನೋರ್ವ ಬಿಜೆಪಿಗೆ 8 ಬಾರಿ ಮತ ಹಾಕುವುದನ್ನು ತೋರಿಸುವ ವೀಡಿಯೊ ವೈರಲ್ ಆದ ಬಳಿಕ ಆತನ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ನಿರಂತರ ಹಲವು ಬಾರಿ ಮತ ಚಲಾಯಿಸುತ್ತಿರುವಾಗ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದು, ಆ ವೀಡಿಯೊವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಾಮಾಜಿಕ ಮಾಧ್ಯಮದ ವೇದಿಕೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಉತ್ತರಪ್ರದೇಶದ ಇಟಾಹ್ ಜಿಲ್ಲೆಯ ಖಿರಿ ಪಮರಾನ್ ಗ್ರಾಮದಲ್ಲಿ ರೆಕಾರ್ಡ್ ಆಗಿದೆ. ಈ ಗ್ರಾಮ ಫರೂಖಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಲಿಗಂಜ್ ವಿಧಾನ ಸಭಾ ಕ್ಷೇತ್ರದ ಭಾಗ. ಈ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಮುಖೇಶ್ ರಜಪೂತ್ ಇಲ್ಲಿನ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿವಿಧ ಸರ್ಕಾರಿ ಗುರುತಿನ ಚೀಟಿಗಳೊಂದಿಗೆ ಬ್ಯಾಲೆಟ್ ಯೂನಿಟ್‌ನಲ್ಲಿರುವ ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರ ಫೋಟೋದ ಮುಂದೆ ಬಟನ್ ಅನ್ನು ಒತ್ತುವ ಮೂಲಕ ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಪರಿಚಿತ ಯುವಕ ಹಲವು ಬಾರಿ ಮತದಾನ ಮಾಡುವಾಗ ಕನಿಷ್ಠ ಎರಡು ಬಾರಿ ಶರ್ಟ್ ಬದಲಾಯಿಸಿರುವುದು ವೀಡಿಯೊ ತೋರಿಸುತ್ತದೆ.

ಈ ಸಂಬಂಧ ಎಟಾ ಜಿಲ್ಲೆಯ ನಯಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಹೇಳಿದ್ದಾರೆ. ಆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮತಗಟ್ಟೆ ಅಧಿಕಾರಿಯನ್ನು ಅಮಾನತು ಮಾಡಲು ಆದೇಶಿಸಲಾಗಿದೆ. ಆ ಮತಗಟ್ಟೆಯಲ್ಲಿ ಮರುಮತದಾನಕ್ಕೂ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಈ ವಿಡಿಯೊ ನೋಡಿದರೆ ತಮ್ಮ ಸೋಲಿನಿಂದ ತಪ್ಪಿಸಿಕೊಳ್ಳಲು ಬಿಜೆಪಿ, ಜನರ ನಿರ್ಣಯವನ್ನು ಬದಿಗೊತ್ತಿ ಆಡಳಿತ ಯಂತ್ರದ ಮೇಲೆ ಒತ್ತಡ ಹಾಕಿ ಪ್ರಜಾಪ್ರಭುತ್ವದ ಲೂಟಿಗೆ ಮುಂದಾಗಿದೆ ಎಂದು ರಾಹುಲ್ ಕಿಡಿ ಕಾರಿದ್ದಾರೆ. ಆಡಳಿತದಲ್ಲಿರುವವರ ಒತ್ತಡಕ್ಕೆ ಮಣಿಯದೇ ಚುನಾವಣೆ ಸಿಬ್ಬಂದಿ ತಮ್ಮ ಸಾಂವಿಧಾನಿಕ ಕರ್ತವ್ಯ ಅರಿತು ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ನಂಬಿದೆ. ಇಲ್ಲವಾದರೆ, ‘ಇಂಡಿಯಾ’ ಅಧಿಕಾರಕ್ಕೆ ಬಂದ ಕೂಡಲೇ ಕರ್ತವ್ಯ ಲೋಪ ಎಸಗಿದವವರ ವಿರುದ್ಧ ಕ್ರಮ ಆಗುತ್ತದೆ. ಸಾಂವಿಧಾನಿಕ ಪ್ರತಿಜ್ಞೆ ಉಲ್ಲಂಘಿಸುವ ಮುನ್ನ 10 ಬಾರಿ ಯೋಚಿಸಿ ಎಂದು ಅವರು ಹೇಳಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://x.com/i/status/1792142014634500451

LEAVE A REPLY

Please enter your comment!
Please enter your name here