ಡಿವೈಎಸ್‌ಪಿ ಖಾತೆಗೆ ಕನ್ನ-16 ಲಕ್ಷ ರೂ. ದೋಚಿದ ಆನ್‌ಲೈನ್ ಕಳ್ಳರು

ಮಂಗಳೂರು(ಹಾಸನ): ಜನಸಾಮಾನ್ಯರು ಆನ್‌ಲೈನ್ ವಂಚಕರ ಬಲೆಗೆ ಬಿದ್ದು ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದುಕೊಂಡ ಹಲವು ಘಟನೆಗಳು ನಮ್ಮ ಮುಂದಿರುವಂತೆಯೇ ಆನ್‌ಲೈನ್ ವಂಚಕರು ಡಿವೈಎಸ್‌ಪಿ ದರ್ಜೆಯ ಅಧಿಕಾರಿಯ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ. ಎಗರಿಸಿದ್ದಾರೆ.

ಹಾಸನ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಬ್ಯಾಂಕ್ ಖಾತೆಗಳಿಂದ ಅಪರಿಚಿತ ಖದೀಮರು ತಮ್ಮ ಬ್ಯಾಂಕ್ ಖಾತೆಗಳಿಗೆ 15,98,761 ರೂ. ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. ಈ ಸಂಬಂಧ ಡಿವೈಎಸ್ಪಿ ಪಿ.ಕೆ.ಮುರಳೀಧರ್ ಅವರು ನಗರದ ಸಿಇಎನ್ ಠಾಣೆಗೆ ನಿನ್ನೆ ದೂರು ನೀಡಿದ್ದಾರೆ. ಅವರು, ಕೆನರಾಬ್ಯಾಂಕ್ ನ ಮಡಿಕೇರಿ ಮುಖ್ಯ ಶಾಖೆ ಹಾಗೂ ಭಾಗಮಂಡಲ ಶಾಖೆಯಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೇ 20 ರಂದು ಮಧ್ಯಾಹ್ನ 1.30ಕ್ಕೆ ಅವರ ಮೊಬೈಲ್ ಗೆ ಬಂದ ಬ್ಯಾಂಕ್ ಎಸ್ಸೆಮ್ಮೆಸ್ ಗಳಿಂದ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿರುವ ವಿಷಯ ಗೊತ್ತಾಗಿದೆ. ಬೆಳಗ್ಗೆ 10.28 ರಿಂದ ಮಧ್ಯಾಹ್ನ 12.56ರವರೆಗೆ 10 ವರ್ಗಾವಣೆಗಳ ಮೂಲಕ ಹಣ ಅಪರಿಚಿತ ವಂಚಕರ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಖದೀಮರನ್ನು ಪತ್ತೆ ಮಾಡಿ ತಮ್ಮ ಹಣ ವಾಪಸ್ ಕೊಡಿಸುವಂತೆ ಡಿವೈಎಸ್ಪಿ ಸೆನ್ ಠಾಣೆಗೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ.

LEAVE A REPLY

Please enter your comment!
Please enter your name here