ಮಂಗಳೂರು(ಬೆಂಗಳೂರು): ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ವಾಟ್ಸಾಪ್ ಮೂಲಕ ಫೋಟೋ ಕಳಿಸಿ ದಂಡ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ನಕಲಿ ಟ್ರಾಫಿಕ್ ಪೊಲೀಸರನ್ನು ಬಂಧಿಸಿದ್ದಾರೆ.
ಮೃತ ಹೆಡ್ ಕಾನ್ಸ್ಟೇಬಲ್ರೊಬ್ಬರ ಐಡಿ ಕಾರ್ಡ್ ಬಳಸಿ ಟ್ರಾಫಿಕ್ ಫೈನ್ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ ಹಾಗೂ ಸುಭಿರ್ ಮಲ್ಲಿಕ್ ಎಂಬ ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರು ವ್ಯಾಟ್ಸಪ್ ಮೂಲಕ ಮೆಸೇಜ್ ಕಳಿಸಿ ದಂಡ ಕಟ್ಟಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಮೃತ ಹೆಡ್ ಕಾನ್ಸ್ ಟೇಬಲ್ ಮಗಳು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು. ಮೃತ ಹೆಡ್ ಕಾನ್ಸ್ಟೇಬಲ್ವೊಬ್ಬರ ಐಡಿ ಕಾರ್ಡ್ ಬಳಸಿ ಟ್ರಾಫಿಕ್ ಫೈನ್ ಆಯಪ್, ಸಾರಿಗೆ ಇಲಾಖೆ ವೆಬ್ ಸೈಟ್ಗಳಿಂದ ಸವಾರರ ಮಾಹಿತಿ ಪಡೆದು, ಬಳಿಕ ತಾವು ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಎಂದು ಸವಾರರಿಗೆ ನಕಲಿ ಐಡಿ ಕಾರ್ಡ್ ಕಳಿಸಿ, ಬಳಿಕ ಯುಪಿಐ ಐಡಿ ಕಳಿಸಿ ಮೊಬೈಲ್ ಮೂಲಕವೇ ದಂಡ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.