ಬೆಂಗಳೂರಿನಲ್ಲಿ ನಕಲಿ ಟ್ರಾಫಿಕ್ ಪೊಲೀಸರು-ವಾಟ್ಸಾಪ್‌ಗೆ ಸಂಚಾರಿ ನಿಯಮ ಉಲ್ಲಂಘಿಸಿದ ಫೋಟೋ ಕಳಿಸಿ ದಂಡ ವಸೂಲಿ

ಮಂಗಳೂರು(ಬೆಂಗಳೂರು): ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ವಾಟ್ಸಾಪ್ ಮೂಲಕ ಫೋಟೋ ಕಳಿಸಿ ದಂಡ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ನಕಲಿ ಟ್ರಾಫಿಕ್ ಪೊಲೀಸರನ್ನು ಬಂಧಿಸಿದ್ದಾರೆ.

ಮೃತ ಹೆಡ್​ ಕಾನ್ಸ್​ಟೇಬಲ್​ರೊಬ್ಬರ ಐಡಿ ಕಾರ್ಡ್ ಬಳಸಿ ಟ್ರಾಫಿಕ್ ಫೈನ್ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ ಹಾಗೂ ಸುಭಿರ್ ಮಲ್ಲಿಕ್ ಎಂಬ  ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇವರು ವ್ಯಾಟ್ಸಪ್ ಮೂಲಕ ಮೆಸೇಜ್ ಕಳಿಸಿ ದಂಡ ಕಟ್ಟಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಮೃತ ಹೆಡ್ ಕಾನ್ಸ್ ಟೇಬಲ್ ಮಗಳು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು. ಮೃತ ಹೆಡ್​ ಕಾನ್ಸ್​ಟೇಬಲ್​ವೊಬ್ಬರ ಐಡಿ ಕಾರ್ಡ್ ಬಳಸಿ ಟ್ರಾಫಿಕ್ ಫೈನ್ ಆಯಪ್, ಸಾರಿಗೆ ಇಲಾಖೆ ವೆಬ್ ಸೈಟ್​ಗಳಿಂದ ಸವಾರರ ಮಾಹಿತಿ ಪಡೆದು, ಬಳಿಕ ತಾವು ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಎಂದು ಸವಾರರಿಗೆ ನಕಲಿ ಐಡಿ ಕಾರ್ಡ್ ಕಳಿಸಿ, ಬಳಿಕ ಯುಪಿಐ ಐಡಿ ಕಳಿಸಿ ಮೊಬೈಲ್ ಮೂಲಕವೇ ದಂಡ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here