ಮಂಗಳೂರು(ಕಾಸರಗೋಡು): ಗ್ಯಾರೇಜ್ ಮಾಲಕನೋರ್ವನ ಮೃತದೇಹ ರಸ್ತೆ ಬದಿ ಚರಂಡಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ(ಮೇ.24) ಬೆಳಿಗ್ಗೆ ಬಂದಡ್ಕದಲ್ಲಿ ನಡೆದಿದೆ.
ಮೃತರನ್ನು ಬಂದಡ್ಕ ಪೆಟ್ರೋಲ್ ಸಮೀಪದ ರತೀಶ್ (42) ಎಂದು ಗುರುತಿಸಲಾಗಿದೆ. ಆಂಬ್ಯುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ರತೀಶ್ ಗುರುವಾರ ರಾತ್ರಿ 9.30 ರ ಸುಮಾರಿಗೆ ಸ್ಕೂಟರ್ ನಲ್ಲಿ ಮನೆಯಿಂದ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಗ್ಯಾರೇಜ್ ಸಮೀಪದ ರಸ್ತೆ ಬದಿ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಕೂಟರ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಕೊಂಡೊಯ್ಯಲಾಗಿದೆ. ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.