ಇಟ್ಟಿಗೆಗಳಿಂದ ಲೋಡ್ ಆಗಿದ್ದ ಟ್ರಾಲಿಗೆ ಗುದ್ದಿದ ಕಾರು – ಭೀಕರ ಅಪಘಾತದಲ್ಲಿ ಅಮ್ಮ,ಮಗಳು ಪಾರಾಗಿದ್ದೆ ಪವಾಡ

ಮಂಗಳೂರು(ನೋಯ್ಡಾ): ದೆಹಲಿಯಿಂದ ತಾಯಿ ಮತ್ತು ಮಗಳು ಕ್ರೆಟಾ ಕಾರಿನಲ್ಲಿ ನೋಯ್ಡಾಗೆ ವೇಗವಾಗಿ ಬರುತ್ತಿದ್ದ ವೇಳೆ ಇಟ್ಟಿಗೆಗಳಿಂದ ಲೋಡ್ ಆಗಿದ್ದ ಟ್ರಾಲಿಗೆ ಗುದ್ದಿದ ಘಟನೆ ಮೇ.23ರಂದು ನಡೆದಿದೆ.

ಟ್ರಾಲಿಗೆ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆಯೇ ಕಾರಿನಲ್ಲಿದ್ದ ಏರ್​ಬ್ಯಾಕ್​ ಓಪನ್ ಆಗಿದ್ದು, ಪರಿಣಾಮ ತಾಯಿ ಮಗಳು ಬಚಾವ್ ಆಗಿದ್ದಾರೆ. ಅಪಘಾತದ ತೀವ್ರತೆಯಿಂದ ಕಾರು ನುಜ್ಜುಗುಜ್ಜಾಗಿದ್ದು, ಕಾರಿನೊಳಗೆ ಲಾಕ್ ಆಗಿದ್ದ ತಾಯಿ ಮಗಳನ್ನು ಸ್ಥಳೀಯರು ಹಾಗೂ ಪೊಲೀಸರು ಆಗಮಿಸಿ ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಲಾಕ್ ಆಗಿದ್ದ ಇವರನ್ನು ಹೊರ ತೆಗೆಯಲು ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಬೇಕಾಗಿದೆ ಎಂಬ ಮಾಹಿತಿ ಇದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here