ಪೊಲೀಸ್ ಇಲಾಖೆಯನ್ನು ದುರ್ಬಳಕೆ‌‌ ಮಾಡೋದನ್ನು ನಾವು ಖಂಡಿಸ್ತೇವೆ-ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಮಂಗಳೂರು: ಪಕ್ಷದ ವಿರುದ್ದ ಸ್ಪರ್ಧೆ ಮಾಡಿರೋದ್ರ ಪರಿಣಾಮ ಏನೂ ಆಗಲ್ಲ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಮತದಾರರನ್ನು ತಲುಪ್ತಿದಾರೆ. ಬಿಜೆಪಿ ಮತ್ತು ನಮ್ಮ‌ ಅಭ್ಯರ್ಥಿಗಳ ಮೇಲೆ ಜನ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಮ್ಮ ಗೆಲುವಿನ ಅಂತರ ಹೆಚ್ಚಾಗಲಿದೆಯೇ ಹೊರತು ಕಡಿಮೆಯಾಗಲ್ಲ. ಯಾರು ಏನೇ ಹೇಳಿದ್ರೂ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಮಂಗಳೂರಿನಲ್ಲಿ ನೈರುತ್ಯ ಪಧವೀದರರ ಮತ್ತು ಶಿಕ್ಷಕರ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಅವರು, ಶಿಕ್ಷಣ ಸಚಿವರ ಬಗ್ಗೆ ನಾನು ಹೇಳಿದ ಉದ್ದೇಶ ಮತ್ತು ಹಿನ್ನೆಲೆ ಬೇರೆಯದ್ದೇ. ಜನ ಶಿಕ್ಷಣ ಕ್ಷೇತ್ರ ಕಲುಷಿತವಾಗಿದೆ ಅಂತ ಮಾತನಾಡ್ತಿದಾರೆ. ಪೋಷಕರು, ‌ಮಕ್ಕಳು ಪರದಾಡ್ತಿದಾರೆ, ಅದರ ಬಗ್ಗೆ ಶಿಕ್ಷಣ ಸಚಿವರು ಗಮನ ಕೊಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ದ ವಿಜಯೇಂದ್ರ ಮತ್ತೆ ಅಸಮಾಧಾನ ವ್ಯಕ್ತಪಡಿಸಿದರು. ಪರಿಷತ್ ಸ್ಥಾನ ಹಂಚಿಕೆ ಸಂಬಂಧ ದೆಹಲಿಗೆ ಪಟ್ಟಿ ಕಳಿಸಿದ್ದೇವೆ. ಜಾತಿವಾರು, ಪ್ರಾಂತ್ಯವಾರು ನೋಡಿ ದೆಹಲಿ ವರಿಷ್ಠರು ತೀರ್ಮಾನ ಮಾಡ್ತಾರೆ. ಬೆಳ್ತಂಗಡಿಯಲ್ಲಿ ವಿನಾಕಾರಣ ನಮ್ಮ‌ ಕಾರ್ಯಕರ್ತರ ಮೇಲೆ ಎಫ್ಐಅರ್‌ ಹಾಕಲಾಗಿದೆ. ರಾಜಕೀಯ ತೀಟೆ ತೀರಿಸೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಪೊಲೀಸ್ ಇಲಾಖೆಯನ್ನು ದುರ್ಬಳಕೆ‌‌ ಮಾಡೋದನ್ನ ನಾವು ಖಂಡಿಸ್ತೇವೆ. ದುರುದ್ದೇಶ ಇಟ್ಟುಕೊಂಡು ನಮ್ಮ ಕಾರ್ಯಕರ್ತನ ಹೆಸರು ಸೇರಿಸಿರೋದು ಖಂಡನೀಯ ಎಂದು ಹೇಳಿದರು.

LEAVE A REPLY

Please enter your comment!
Please enter your name here