



ಮಂಗಳೂರು(ಬಿಹಾರ): ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಕೇವಲ ಎರಡು ಗಂಟೆಗಳಲ್ಲಿ 16 ಜನರು ಬಿಸಿಲಿನ ಪ್ರಖರತೆಯ ಕಾರಣಗಳಿಂದ ಸಾವನ್ನಪ್ಪಿದ್ದು, ಶಾಖ ಸಂಬಂಧಿತ ಕಾರಣಗಳಿಂದಾಗಿ ಕನಿಷ್ಠ 35 ರೋಗಿಗಳನ್ನು ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.







ಸಾಕಷ್ಟು ವೈದ್ಯರು, ಔಷಧಗಳು ಮತ್ತು ಐಸ್ ಪ್ಯಾಕ್‌ಗಳಿದ್ದು, ಹೆಚ್ಚಿನ ಕೂಲರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಕಳೆದ ಕೆಲ ದಿನಗಳಿಂದ ಬಿಹಾರ ಬಿಸಿಗಾಳಿಯಿಂದ ತತ್ತರಿಸುತ್ತಿದೆ. ಬಿಸಿಲಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಜೂನ್ 8 ರವರೆಗೆ ಮುಚ್ಚುವಂತೆ ಆದೇಶಿಸಿದೆ. ಬಿಸಿಲಿನ ಕಾರಣ ಹತ್ತಾರು ವಿದ್ಯಾರ್ಥಿಗಳು ಮೂರ್ಛೆ ಹೋದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೇಖ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಕನಿಷ್ಠ 16 ಹುಡುಗಿಯರು ಮೂರ್ಛೆ ಹೋಗಿದ್ದರು. ಆಂಬುಲೆನ್ಸ್ ವ್ಯವಸ್ಥೆ ಮಾಡಲು ಸಾಧ್ಯವಾಗದ ನಂತರ ಅವರನ್ನು ದ್ವಿಚಕ್ರ ವಾಹನಗಳು ಮತ್ತು ಇ-ರಿಕ್ಷಾಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.















