ಮುಖಂಡರ ವಿರುದ್ಧದ ಪ್ರಕರಣ ಕೈಬಿಡುವಂತೆ ಹಿಂದೂ ಜಾಗರಣ ವೇದಿಕೆ ಮುಖಂಡ ನರಸಿಂಹ ಶೆಟ್ಟಿ ಮಾಣಿ ಆಗ್ರಹ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಬೇರೆ ಬೇರೆ ರೀತಿಯ ನಾಟಕಗಳನ್ನು ಮಾಡುತ್ತಾ ಸರ್ಕಾರದ ಕೆಲವು ಇಲಾಖೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ವ್ಯವಸ್ಥೆಗೆ ಕೈ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದರಲ್ಲೂ ಪೊಲೀಸ್‌ ಇಲಾಖೆಯನ್ನು ಹೆಸರಿಗೆ ಮಾತ್ರ ಇಲಾಖೆ ಅಲ್ಲದೆ ಸದ್ರಿ ಇಲಾಖೆಗೆ ಯಾವುದೇ ಸ್ಥಿರ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡುತ್ತಾ ಇಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ನರಸಿಂಹ ಶೆಟ್ಟಿ ಮಾಣಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಒಟ್ಟು ರಕ್ಷಣೆಯ ಜವಾಬ್ದಾರಿ ಇರುವುದೇ ಪೊಲೀಸ್ ಇಲಾಖೆಯ ಮೇಲೆ. ಅಂತಹ ಇಲಾಖೆಯ ನೈತಿಕ ಸ್ಥೆರ್ಯವನ್ನು ನಿಯಂತ್ರಣದಲ್ಲಿಟ್ಟುಕೊಂಡು ಇಲಾಖೆಯನ್ನು ದುರ್ಬಲ ಮಾಡುವ ಕೆಲಸ ಇಂದಿನ ರಾಜ್ಯ ಸರ್ಕಾರ ಮಾಡುತ್ತಿದೆ. ಮಂಗಳೂರು ನಗರದ ಕಂಕನಾಡಿ ಎಂಬಲ್ಲಿ ಸಾರ್ವಜನಿಕರ ಉಪಯೋಗದ ರಸ್ತೆಯಲ್ಲಿ ಸಾರ್ವಜನಿಕ ಪ್ರಾರ್ಥನೆ ಮಾಡಿದ್ದನ್ನು ನಾವು ಹಿಂದೂ ಸಂಘಟನೆಯಾಗಿ ತೀವ್ರವಾಗಿ ಖಂಡಿಸುತ್ತೇವೆ. ಈ ರೀತಿಯಾಗಿ ಖಂಡಿಸುವಾಗ ಹಲವಾರು ಮಂದಿ ಹಿಂದೂಗಳ ದೇವಸ್ಥಾನದ ಜಾತ್ರೆ ಉತ್ಸವವು ಹಾಗೂ ಕೆಲವೊಂದು ಕಾರ್ಯಕ್ರಮಗಳು ರಸ್ತೆಗಳಲ್ಲಿ ನಡೆಯುತ್ತದೆ ಎಂಬ ಹೇಳಿಕೆಗಳನ್ನು ನೀಡುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಹೇಳಿದರು.

ನಮ್ಮ ಸಮಸ್ತ ನಾಗರಿಕರಿಗೆ ತಿಳಿದಿರುವ ಹಾಗೆ ಹಿಂದೂ ದೇವಸ್ಥಾನಗಳಲ್ಲಿ, ದೈವ ಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ಕಾರ್ಯಕ್ರಮಗಳು ಅನಾದಿಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯ. ಅದಲ್ಲದೆ ಹಿಂದೂ ಸಮುದಾಯ ಎಂದೂ ಕೂಡಾ ಜಾತಿ ಅಥವಾ ಮತೀಯ ಆಧಾರದ ಮೇಲೆ ಭಾರತದ ನೆಲದ ಭೂಭಾಗದ ವಿಭಜನೆ ಅಥವಾ ಪ್ರತ್ಯೇಕತೆಗೆ ಬೇಡಿಕೆ ಅಥವಾ ಅಪೇಕ್ಷೆಯನ್ನು ಪಟ್ಟಿರುವ ಇತಿಹಾಸವೇ ಇಲ್ಲ. ಆದುದರಿಂದ ನಮ್ಮ ಮುಖಂಡರ ಮೇಲೆ ಹಾಕಿದ ಪ್ರಕರಣವನ್ನು ತೆಗೆಯದಿದ್ದಲ್ಲಿ ಸರಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆ ಎಂದು ಹೇಳಿದರು.

LEAVE A REPLY

Please enter your comment!
Please enter your name here