ಮಂಗಳೂರು: ಸುಸ್ಥಿರ ಪರಿಸರ ಮತ್ತು ಯುವಕರ ಬದಲಾವಣೆಗೆ ವೇಗವರ್ಧಕ ಕುರಿತಂತೆ ರಾಷ್ಟ್ರೀಯ ಸಮ್ಮೇಳನ ಪ್ರಯುಕ್ತಿ 2024 ಮಂಗಳೂರಿನ ವಿದ್ಯಾನಗರದ ಡಾ|ಎಂ.ವಿ.ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಡಾ.ಎಂ ವಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಫ್ರೋಫೆಶನಲ್ ಸೈನ್ಸ್ ಆಂಡ್ ಮ್ಯಾನ್ಮೆಂಜ್ಮೆಂಟ್ ಸಂಸ್ಥೆ ವತಿಯಿಂದ ನಡೆದ ಈ ಸಮ್ಮೇಳನ ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಪ್ರೊ.ಡಾ. ಹಿಮಾ ಊರ್ಮಿಳಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಮ್ಮೇಳನದ ಉದ್ಘಾಟನೆಯನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರದಾದ ಪ್ರವೀಣ್ ಬಿ.ನಾಯಕ್ ನೆರವೇಸಿದರು. ಬಳಿಕ ಮಾತನಾಡಿದ ಅವರು, ಪರಿಸರದ ಬಗೆ ಪ್ರತಿಯೊಬ್ಬರು ಕಾಳಜಿ ವಹಿಸಿಕೊಳ್ಳಬೇಕು, ಆ ಮೂಲಕ ಪರಿಸರ ಉಳಿಸುವ ಕೆಲಸ ಆಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ.ಡಾ. ಹಿಮಾ ಊರ್ಮಿಳಾ ಶೆಟ್ಟಿ, ಇದೊಂದು ಉತ್ತಮ ಕಾರ್ಯಕ್ರಮ. ಸಂಪನ್ಮೂಲ ವ್ಯಕ್ತಿಗಳಿಂದ ಸಮ್ಮೇಳನ ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಲವಾರು ಪ್ರಯೋಜನವಾಗಲಿ ಎಂದು ಹೇಳಿದರು.
ಸಂಘಟನಾ ಅಧ್ಯಕ್ಷ ಹಾಗೂ ಪ್ರಾಂಶುಪಾಲ ಪ್ರೊ.ಡಾ| ಪ್ರಕಾಶ್ ಅಮಿನ್ ಅವರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಸ್ವಪ್ನಾ ವಂದಿಸಿ, ಐಶ್ವರ್ಯ ಕೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶೈಕ್ಷಣಿಕ ನಿರ್ದೇಶಕ ಪ್ರೊ.ಡಾ ಸುಮಾ ಎಸ್.ರೈ, ವಿದ್ಯಾರ್ಥಿ ಸಂಯೋಜಕ ಶ್ರವಣ್, ಅನುಷಾ ಉಪಸ್ಥಿತರಿದ್ದರು.