ಟೆಲಿಫೋನ್ ಜಂಕ್ಷನ್ ಬಾಕ್ಸ್ ಗೆ ಬೈಕ್ ಡಿಕ್ಕಿ- ಯುವಕರಿಬ್ಬರು ಮೃತ್ಯು

ಮಂಗಳೂರು/ಕಾಸರಗೋಡು: ನಿಯಂತ್ರಣ ತಪ್ಪಿದ ಬೈಕ್ ಟೆಲಿಫೋನ್ ಜಂಕ್ಷನ್ ಬಾಕ್ಸ್ ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟ ಘಟನೆ ತ್ರಿಕ್ಕರಿಪುರದಲ್ಲಿ ಶುಕ್ರವಾರ(ಜೂ.7) ಬೆಳಿಗ್ಗೆ ನಡೆದಿದೆ.

ಸೌತ್ ತ್ರಿಕ್ಕರಿಪುರ ಮಟ್ಟಮ್ಮಲ್ ನ ವಿ.ಪಿ . ಎಂ ಮುಹಮ್ಮದ್ ಸುಹೈಲ್ (27) ಮತ್ತು ಪಯ್ಯನೂರಿನ ಕೆ. ಶಹೀದ್ (27) ಮೃತ ಪಟ್ಟವರು ಎಂದು ಗುರುತಿಸಲಾಗಿದೆ. ಪಯ್ಯನ್ನೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಟೆಲಿಪೋನ್ ಜಂಕ್ಷನ್ ಬಾಕ್ಸ್ ಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here