ಅನುಮಾನಾಸ್ಪದವಾಗಿ ಯುವಕ ನಾಪತ್ತೆ, ಪ್ರಕರಣ ದಾಖಲು

ಮಂಗಳೂರು(ಕಾಪು): ಯುವಕನೋರ್ವ ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ಕಾಪುವಿನಲ್ಲಿ ಗುರುವಾರ ಸಂಜೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಕರಣ್ ಸಾಲ್ಯಾನ್ (20) ಎಂಬಾತ ನಾಪತ್ತೆಯಾದ ಯುವಕ.

ಬೆಳಗ್ಗೆ ಕಾಪು ಬೀಚ್ ಬಳಿ ಕರಣ್ ಬೈಕ್, ಮೊಬೈಲ್ ಫೋನ್, ಹಣ ಸೇರಿದಂತೆ ವ್ಯಾಲೆಟ್ ಪತ್ತೆಯಾಗಿದೆ. ಕಾಪು ಬೀಚ್ ಬಳಿ ಸ್ಥಳೀಯರು ಮತ್ತು ಕರಣ್‌ನ ಕುಟುಂಬದ ಸದಸ್ಯರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕರಣ್ ಕಾಣೆಯಾಗಿರುವ ಬಗ್ಗೆ ತಾಯಿ ತುಳಸಿ ಸಾಲ್ಯಾನ್ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here